ಬಹರಾಯಿಚ್ (ಉತ್ತರ ಪ್ರದೇಶ): ‘ಇಂಡೋ-ನೇಪಾಳ ಗಡಿ ಬಳಿಯಿರುವ ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟದ ಜಾಲವನ್ನು ಪತ್ತೆ ಹಚ್ಚಲು ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುವುದು’ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

‘ನಕಲಿ ಮದ್ಯದ ಕಳ್ಳಸಾಗಣೆ ಮತ್ತು ವ್ಯಾಪಾರವನ್ನು ಪತ್ತೆ ಹಚ್ಚಲು ಸಶಸ್ತ್ರ ಸೀಮಾಬಲ (ಎಸ್ಎಸ್ಬಿ) ಮತ್ತು ಅಬಕಾರಿ ಇಲಾಖೆಯು ಜಂಟಿ ಕಾರ್ಯಾಚರಣೆ ನಡೆಸಲಿವೆ’ ಎಂದು ಬಹರಾಯಿಚ್ ಜಿಲ್ಲಾಧಿಕಾರಿ ದಿನೇಶ್ ಚಂದ್ರ ಅವರು ಹೇಳಿದರು.

‘ಮಿಹಿನ್ಪುರ್ವಾ ಅರಣ್ಯ ಪ್ರದೇಶದಲ್ಲಿ ಅಕ್ರಮ ಮದ್ಯ ಉತ್ಪಾದನೆ ಮತ್ತು ಮಾರಾಟವನ್ನು ಡ್ರೋನ್ ಸಹಾಯದಿಂದ ಪತ್ತೆ ಹಚ್ಚಲಾಗುವುದು. ಈ ಸಂಬಂಧ ಪರಿಣಾಮಕಾರಿ ಜಾಲವನ್ನು ಸೃಷ್ಟಿಸುವಂತೆ ಅಬಕಾರಿ ಇಲಾಖೆಯು ನಿರ್ದೇಶನ ನೀಡಿದೆ. ಈ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾದವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.