ನವದೆಹಲಿ: ‘ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಸುವಾಗ ವೆಚ್ಚವನ್ನು ಆಧರಿಸಿ ಶೇ 50ರಷ್ಟು ಲಾಭ ನೀಡಬೇಕು ಎಂಬ ಶಿಫಾರಸು ಜಾರಿಗೆ ಹಿಂದಿನ ಯುಪಿಎ ಸರ್ಕಾರ ನಿರಾಕರಿಸಿತ್ತು’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮಂಗಳವಾರ ಆರೋಪಿಸಿದರು.

2020–21ರಲ್ಲಿ ನಡೆಸಿದ ಪ್ರತಿಭಟನೆ ವೇಳೆ 750 ಮಂದಿ ರೈತರು ಮೃತಪಟ್ಟ ಕುರಿತು ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ದೀಪಿಂದರ್ ಹೂಡಾ ಅವರ ಪೂರಕ ಪ್ರಶ್ನೆಗೆ ಹೀಗೆ ಉತ್ತರಿಸಿದರು.

ಮೃತಪಟ್ಟ ರೈತರ ಕುಟುಂಬದವರಿಗೆ ಉದ್ಯೋಗ ನೀಡುವ ಚಿಂತನೆ ಇದೆಯೇ ಎಂದು ಹೂಡಾ ಗಮನಸೆಳೆದರು. ಅದಕ್ಕೆ ಸಚಿವರು, ಇದು ಮುಖ್ಯ ಪ್ರಶ್ನೆಗೆ ಪೂರಕವಾಗಿಲ್ಲ ಎಂದು ಹೇಳಿದರು. ಆದರೆ, ರೈತರ ಕಲ್ಯಾಣ ಕುರಿತಂತೆ ಸರ್ಕಾರ ಪೂರ್ಣ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ವೆಚ್ಚ ಆಧರಿಸಿ ಶೇ 50ರಷ್ಟು ಲಾಭವನ್ನು ರೈತರಿಗೆ ನೀಡಬೇಕು ಎಂಬ ಸ್ವಾಮಿನಾಥನ್ ಆಯೋಗದ ವರದಿ ಶಿಫಾರಸು ಜಾರಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನಿರಾಕರಿಸಿತ್ತು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.