ನವದೆಹಲಿ: ಭಾರತದ ಯುಪಿಐ ಆಧರಿತ ಡಿಜಿಟಲ್ ಪಾವತಿ ವ್ಯವಸ್ಥೆಗೆ ನೆರೆಯ ಶ್ರೀಲಂಕಾ ಮತ್ತು ಮಾರಿಷಸ್ನಲ್ಲಿ ಇಂದು ಚಾಲನೆ ನೀಡಲಾಗಿದೆ.

ಯುಪಿಐ ಮಾತ್ರವಲ್ಲದೆ ಭಾರತದ ರುಪೇ ಕಾರ್ಡ್ ಅನ್ನು ಕೂಡ ಮಾರಿಷಸ್ನಲ್ಲಿ ಬಳಸಬಹುದಾಗಿದೆ.

ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗನೌತ್ ಮತ್ತು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಜತೆಗೆ ಕಾರ್ಯಕ್ರಮಕ್ಕೆ ವರ್ಚುವಲ್ ಮೂಲಕ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ‘ಆಧುನಿಕ ಡಿಜಿಟಲ್ ತಂತ್ರಜ್ಞಾನದೊಂದಿಗೆ ಐತಿಹಾಸಿಕ ಸಂಬಂಧಗಳನ್ನು ಜೋಡಿಸಲಾಗಿದೆ’ ಎಂದು ಬಣ್ಣಿಸಿದ್ದಾರೆ.

ಮೂರು ದೇಶಗಳಿಗೆ ಇಂದು ಪ್ರಮುಖ ದಿನವಾಗಿದೆ. ಶ್ರೀಲಂಕಾ ಮತ್ತು ಮಾರಿಷಸ್ ಯುಪಿಐ ಬಳಕೆಯಿಂದ ಸಾಕಷ್ಟು ಉಪಯೋಗಗಳನ್ನು ಪಡೆಯಲಿದೆ ಎಂದು ಭಾವಿಸುತ್ತೇನೆ. ಯುಪಿಐ ಭಾರತದೊಂದಿಗೆ ಪಾಲುದಾರರನ್ನು ಒಗ್ಗೂಡಿಸುವ ಹೊಸ ಜವಾಬ್ದಾರಿಯನ್ನು ಕಾರ್ಯಗತಗೊಳಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಡಿಜಿಟಲ್ ಪಾವತಿಯು ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ನೈಸರ್ಗಿಕ ವಿಪತ್ತು, ಆರೋಗ್ಯ ಸಂಬಂಧಿತ, ಆರ್ಥಿಕ ಅಥವಾ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮೊದಲು ಪ್ರತಿಸ್ಪಂದಿಸುವ ರಾಷ್ಟ್ರ ಎಂದರೆ ಭಾರತ. ಅದು ಹೀಗೆಯೇ ಮುಂದುವರಿಯುತ್ತದೆ ಎಂದರು.

ಇದರಿಂದಾಗಿ ಭಾರತೀಯರು ಮಾರಿಷಸ್ ಮತ್ತು ಶ್ರೀಲಂಕಾಕ್ಕೆ ಪ್ರಯಾಣಿಸಿದರೆ ಅಥವಾ ಅವೆರಡೂ ದೇಶದವರು ಭಾರತಕ್ಕೆ ಬಂದಾಗ ಹಣ ಪಾವತಿ ಇನ್ನಷ್ಟು ಸುಲಭವಾಗಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.