ಭೋಪಾಲ್: ಆಹಾರದಲ್ಲಿ ಟೊಮೆಟೊ ಬಳಸಿದ್ದಕ್ಕೆ ಪತ್ನಿಯೊಬ್ಬಳು ಗಂಡನ ಮನೆ ಬಿಟ್ಟು ಹೋದ ವಿಕ್ಷಿಪ್ತ ಘಟನೆ ಮಧ್ಯಪ್ರದೇಶದ ಶಾಹ್ದೋಲ್ ಜಿಲ್ಲೆಯ ಧನ್‌ಪುರಿ ಎಂಬಲ್ಲಿ ನಡೆದಿದೆ.

ಸಂದೀಪ್ ಬುರ್ಮಾನ್ ಎಂಬವರ ಪತ್ನಿಯೇ ಟೊಮೆಟೊ ವಿಚಾರಕ್ಕಾಗಿ ಮನೆ ತೊರೆದವರು.

ಧನ್‌ಪುರಿ ಪ್ರದೇಶದಲ್ಲಿ ಸಣ್ಣ ಡಾಬಾವೊಂದು ನಡೆಸುತ್ತಿರುವ ಸಂದೀಪ್ ಅವರು, ಆಹಾರದಲ್ಲಿ ಎರಡ್ಮೂರು ಟೊಮೆಟೊ ಬಳಸಿದ್ದರು. ಟೊಮೆಟೊ ದರ ಗಗನಕ್ಕೇರಿದ್ದು, ಪತಿ ಟೊಮೆಟೊ ಬಳಸಿದ್ದರಿಂದ ಪತ್ನಿ ಕೋಪಗೊಂಡಿದ್ದಾಳೆ. ಹೀಗಾಗಿ ಇವರಿಬ್ಬರ ನಡುವೆ ಜಗಳ ನಡೆದು ಪತ್ನಿ ಮನೆ ತೊರೆದಿದ್ದಾಳೆ.

ಈ ಬಗ್ಗೆ ಧನ್‌ಪುರಿ ಪೊಲೀಸ್ ಠಾಣೆಯಲ್ಲಿ ಪತಿ ದೂರು ದಾಖಲಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿರುವ ಧನ್‌ಪುರಿ ಪೊಲೀಸ್ ಠಾಣೆಯ ಉಸ್ತುವಾರಿ ಸಂಜಯ್ ಜೈಸ್ವಾಲ್, ‘ಆಹಾರದಲ್ಲಿ ಟೊಮೆಟೊ ಬಳಸಿದ್ದರಿಂದ ಕೋಪಗೊಂಡ ಪತ್ನಿ, ಅಪ್ರಾಪ್ತ ಮಗಳೊಂದಿಗೆ ಮನೆ ತೊರೆದಿದ್ದಾರೆ. ಉಮಾರಿಯ ಜಿಲ್ಲೆಯಲ್ಲಿರುವ ತನ್ನ ಸಹೋದರಿಯ ಮನೆಗೆ ಪತ್ನಿ ತೆರಳಿದ್ದಾರೆ. ಪತಿಯ ಸಮ್ಮುಖದಲ್ಲಿ ಪತ್ನಿಯೊಂದಿಗೆ ಮಾತುಕತೆ ನಡೆಸಲಾಗಿದ್ದು, ಅವರು ಮನೆಗೆ ಮರಳುವ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.