ಜಾಮ್ನಗರ್ (ಗುಜರಾತ್): ಫೆ.27ರಂದು ಪಾಕಿಸ್ತಾನ ಭಾರತದ ವಾಯುನೆಲೆ ಮೇಲೆ ದಾಳಿ ನಡೆಸಲು ಬಂದಾಗ ನಮ್ಮಲ್ಲಿ ರಫೇಲ್ ಯುದ್ಧ ವಿಮಾನವಿದ್ದಿದ್ದರೆ ನಮ್ಮಲ್ಲಿದ್ದ ಯಾವುದೇ ಯುದ್ಧ ವಿಮಾನ ನಮಗೆ ನಷ್ಟವಾಗುತ್ತಿರಲಿಲ್ಲ ಮತ್ತು ಅವರಿಗೆ ನಮ್ಮ ಕೈಯಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ.ಇದನ್ನು ಅರ್ಥ ಮಾಡಿಕೊಳ್ಳಲು ದಯವಿಟ್ಟು ಸಾಮಾನ್ಯ ಬುದ್ಧಿ ಬಳಸಿ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ಹೇಳಿದ್ದಾರೆ.

ಸೋಮವಾರ ಗುಜರಾತಿನ ಜಾಮ್ನಗರ್ ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅದನ್ನು ಬುಡಸಮೇತ ಕಿತ್ತೊಗೆಯಬೇಕಿದೆ.ಅದರ ಬೇರು ಇರುವುದು ಪಾಕಿಸ್ತಾನದಲ್ಲಿ ಎಂದಿದ್ದಾರೆ.

ಫೆ. 27ರಂದು ಪಾಕ್ ವಿಮಾನಗಳು ನಮ್ಮ ಮೇಲೆ ದಾಳಿ ನಡೆಸಲು ಬಂದಾಗ ನಾವು ಅವುಗಳನ್ನು ಹಿಮ್ಮೆಟ್ಟಿಸಿದ್ದೆವು. ಈ ಜಗಳದ ವೇಳೆ ರಫೇಲ್ ಇದ್ದಿದ್ದರೆ ಒಳ್ಳೆಯದಿತ್ತು ಎಂದು ನಾನು ಹೇಳಿದ್ದೆ. ಆದರೆ ಅವರು (ಕಾಂಗ್ರೆಸ್) ಮೋದಿ ನಮ್ಮ ವಾಯುದಳದ ಸಾಮರ್ಥ್ಯವನ್ನೇ ಪ್ರಶ್ನಿಸುತ್ತಿದ್ದಾರೆ ಅಂತಾರೆ.

ಕಳೆದ ವಾರ ಇಂಡಿಯಾ ಟುಡೇ ಸಮಾವೇಶದಲ್ಲಿ ಮಾತನಾಡಿದ ಮೋದಿ ತಮ್ಮ ಭಾಷಣದಲ್ಲಿರಫೇಲ್ ವಿಮಾನದ ಬಗ್ಗೆ ಉಲ್ಲೇಖಿಸಿದ್ದರು.ವಾಯುದಾಳಿ ವೇಳೆ ರಫೇಲ್ ಯುದ್ಧ ವಿಮಾನಇದ್ದಿದ್ದರೆ ಅದರ ಫಲಿತಾಂಶವೇ ಭಿನ್ನವಾಗಿರುತ್ತಿತ್ತು ಎಂದು ದೇಶದ ಜನರು ಹೇಳುತ್ತಿದ್ದಾರೆ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ರಫೇಲ್ ವಿಮಾನಗಳು ವಾಯುಪಡೆಗೆ ಸಿಗಲು ವಿಳಂಬವಾಗುತ್ತಿರುವುದಕ್ಕೆ ಮೋದಿಯೇ ಕಾರಣ ಎಂದಿದ್ದರು. ವಾಯುಸೇನೆಯ₹30,000 ಕೋಟಿ ಅನಿಲ್ ಅಂಬಾನಿಗೆ ನೀಡಿ ನಾಚಿಕೆಯಿಲ್ಲದೆ ಮೋದಿ ಮಾತನಾಡುತ್ತಿದ್ದಾರೆ.ಅವಧಿ ಮೀರಿದ ಯುದ್ಧವಿಮಾನವನ್ನು ಅಭಿನಂದನ್ ಹಾರಾಟ ನಡೆಸಿದ್ದಕ್ಕೂ ಮೋದಿಯೇ ಕಾರಣ ಎಂದು ರಾಹುಲ್ ಟೀಕಿಸಿದ್ದು, ಇದಕ್ಕೆ ಮೋದಿ ಸಾಮಾನ್ಯ ಬುದ್ಧಿ ಬಳಸಿ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.