ಉತ್ತರಪ್ರದೇಶ: ಬಸಂತ ಪಂಚಮಿ ಪ್ರಯುಕ್ತ ಇಲ್ಲಿನ ಪ್ರಯಾಗ್ ರಾಜ್‌ನಸಂಗಮ ಕ್ಷೇತ್ರದಲ್ಲಿಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರದೇವ್ ಸಿಂಗ್ ಸೇರಿದಂತೆ ಹಲವರು 'ಪವಿತ್ರಸ್ನಾನ' ಮಾಡಿದೇವರಿಗೆ ಪೂಜೆ ನೆರವೇರಿಸಿದರು.

ಆದಿತ್ಯನಾಥ್ ಜೊತೆ ಅವರ ಮಂತ್ರಿ ಮಂಡಲದಲ್ಲಿ ಸಚಿವರಾಗಿರುವ ಸಿದ್ದಾರ್ಥನಾಥ್ ಸಿಂಗ್ ಕೂಡ ನದಿ ನೀರಿನಲ್ಲಿ ಮುಳುಗಿ ಏಳುವ ಮೂಲಕ ಪವಿತ್ರ ಸ್ನಾನದಲ್ಲಿ ಪಾಲ್ಗೊಂಡರು. ಬಸಂತ ಪಂಚಮಿ ದಿನವಾದ ಇಂದು ಉತ್ತರಪ್ರದೇಶದ ಹಲವೆಡೆ ವಸಂತನ ಆಗಮನವನ್ನು ಪೂಜೆ ಪುನಸ್ಕಾರಗಳ ಮೂಲಕ ಬರಮಾಡಿಕೊಳ್ಳಲಾಗುತ್ತದೆ. ಈ ದಿನ ದೇವಾಲಯಗಳಲ್ಲಿ ಸರಸ್ವತಿ ದೇವಿಗೆ ವಿಶೇಷ ಪೂಜೆ ನಡೆಯುತ್ತವೆ.

ಉತ್ತರಭಾರತದ ಹಲವೆಡೆ ಬಸಂತ ಪಂಚಮಿ ದಿನದ ನಂತರ 40 ದಿನಗಳಿಗೆ ಸರಿಯಾಗಿ ಹೋಳಿ ಆಚರಿಸಲಾಗುತ್ತದೆ. ಗಂಗಾ ಯಮುನಾ ನದಿಗಳು ಸೇರುವ ಪ್ರಯಾಗ್ ರಾಜ್ ಬಳಿಸಂಗಮದಲ್ಲಿ ಜನರು ಇಂದು ಪವಿತ್ರ ಸ್ನಾನದಲ್ಲಿ ಪಾಲ್ಗೊಂಡು ಭಕ್ತಿ ಭಾವಗಳಿಂದ ದೇವರಿಗೆ ಪೂಜೆ ನೆರವೇರಿಸುವುದು ವಾಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.