ಬಹ್ರೇಚ್(ಉತ್ತರ ಪ್ರದೇಶ): ಬಹರಾಯಿಚ್ ಜಿಲ್ಲೆಯ ಮೆಹ್ಸಿ ತಾಲ್ಲೂಕಿನಲ್ಲಿ ಉತ್ತರ ಪ್ರದೇಶದ ಅರಣ್ಯ ಇಲಾಖೆಯ ತಂಡವು ಗುರುವಾರ ಗಂಡು ತೋಳವೊಂದನ್ನು ಸೆರೆಹಿಡಿದಿದ್ದಾರೆ.

‘ಆಪರೇಷನ್ ಭೇಡಿಯಾ’ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಯಿತು. ‘ಸೀಸಯ್ಯ ಚೂಡಾಮಣಿ ಗ್ರಾಮದ ಬಳಿ ಇರಿಸಲಾಗಿದ್ದ ಬೋನಿನಲ್ಲಿ ಗಂಡು ತೋಳ ಸಿಕ್ಕಿಬಿದ್ದಿದೆ’ ಎಂದು ‘ಆಪರೇಷನ್ ಭೇಡಿಯಾ’ ಉಸ್ತುವಾರಿ ಬಾರಾಬಂಕಿ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಆಕಾಶದೀಪ್ ತಿಳಿಸಿದ್ದಾರೆ.

ಬಹರಾಯಿಚ್‌ನಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ತೋಳದ ದಾಳಿಗೆ ಆರು ಮಕ್ಕಳು ಸೇರಿದಂತೆ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇಲ್ಲಿಯವರೆಗೆ ಇಲಾಖೆಯು ಸುಮಾರು ನಾಲ್ಕು ತೋಳಗಳನ್ನು ಸೆರೆಹಿಡಿದಿದೆ.

ತೋಳಗಳನ್ನು ಹಿಡಿಯಲು ಅರಣ್ಯ ಇಲಾಖೆಯಿಂದ ಡ್ರೋನ್ ಕ್ಯಾಮೆರಾಗಳು ಮತ್ತು ಥರ್ಮಲ್ ಡ್ರೋನ್ ಮ್ಯಾಪಿಂಗ್ ತಂತ್ರಗಳನ್ನು ಬಳಸಲಾಗುತ್ತಿದೆ.
.ಚಿಕ್ಕಮಗಳೂರು | ವಿದ್ಯುತ್ ಸ್ಪರ್ಶಿಸಿ ಎಸ್ಟೇಟ್ನಲ್ಲಿ ಆನೆ ಸಾವು.ವಿಜಯಪುರ: ತೋಳ ದಾಳಿಗೆ 13 ಕುರಿಮರಿಗಳು ಬಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.