ಭೋಪಾಲ್:‘ಚೀನಾದಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಜತೆಗೆ ಅಂಥ ಸರಕುಗಳನ್ನು ದೇಶೀಯವಾಗಿಯೇ ಉತ್ಪಾದಿಸಲು ಕೈಗಾರಿಕೋದ್ಯಮಿಗಳು ಮುಂದಾಗಬೇಕು’ ಎಂದುವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿದ್ದಾರೆ.

ಚೀನಾದ ಸರಕುಗಳನ್ನು ಖರೀದಿಸುವುದರಿಂದ ಶತ್ರುಗಳನ್ನು ಸಬಲೀಕರಣಗೊಳಿಸಿದಂತೆ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಈ ಕುರಿತು ದೊಡ್ಡ ಉದ್ಯಮಿಗಳು, ತಯಾರಕರ ಸಭೆ ನಡೆಸಿ ಸ್ಥಳೀಯವಾಗಿ ಉತ್ಪಾದಿಸಲು ಆಧ್ಯತೆ ನೀಡುವಂತೆ ಹೇಳುತ್ತಿದ್ದೇವೆ. ಅಲ್ಲದೆ ಚೀನಾದ ಸರಕುಗಳು ಅಗ್ಗವಾಗಿದ್ದರೂ ಅದನ್ನು ಬಹಿಷ್ಕರಿಸುವಂತೆ ಜನರಲ್ಲಿ ಮನವಿ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.

ಸಂಘಟನೆಯೂ ಎರಡು ದಿನಗಳ ಕೇಂದ್ರ ಸಮಿತಿ ಸಭೆಯನ್ನು ಇತ್ತೀಚೆಗೆ ನಡೆಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಅವರು,‘ಕೃಷಿ ಕ್ಷೇತ್ರವನ್ನು ಬಲಪಡಿಸುವ ಜೊತೆಗೆ ಉದ್ಯೋಗ ಸೃಷ್ಟಿ ಕುರಿತು ಚರ್ಚಿಸಲಾಯಿತು. ಬಡವರು ಮತ್ತು ಮಹಿಳೆಯರ ಆರೋಗ್ಯ ಮತ್ತು ಶಿಕ್ಷಣವನ್ನು ಸುಧಾರಿಸುವ ಕುರಿತು ಚರ್ಚೆ ನಡೆದಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.