ನವದೆಹಲಿ: ರಾಷ್ಟ್ರ ರಾಜಧಾನಿ ರಾಜಪಥ್ನಲ್ಲಿ ನಡೆದ 73ನೇ ಗಣರಾಜ್ಯೋತ್ಸವದಲ್ಲಿ ಗಮನ ಸೆಳೆದ ವಿಷಯಗಳಲ್ಲಿ ರಾಷ್ಟ್ರಪತಿಗಳ ಅಂಗರಕ್ಷಕಾ ಪಡೆಯ ಕುದುರೆ ವಿರಾಟ್ ನಿವೃತ್ತಿಯು ಸಹ ಒಂದು.

13 ಬಾರಿ ಗಣರಾಜ್ಯೋತ್ಸವದ ಪರೇಡ್ಗಳಲ್ಲಿ ಭಾಗವಹಿಸಿದ್ದ ಕುದುರೆ ವಿರಾಟ್ ನಿನ್ನೆ ಸೇವೆಯಿಂದ ನಿವೃತ್ತಿಯಾಯಿತು. ರಾಷ್ಟ್ರಪತಿ ರಾಮ

ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೆರವಣಿಗೆಯ ನಂತರ ಕುದುರೆಯನ್ನು ತಟ್ಟಿ, ಹಣೆಯನ್ನು ನೇವರಿಸಿ ಬೀಳ್ಕೊಟ್ಟರು.

ರಾಷ್ಟ್ರಪತಿಗಳ ಅಂಗರಕ್ಷಕ ಕಮಾಂಡೆಂಟ್ನ ಕಪ್ಪು ಕುದುರೆ ವಿರಾಟ್, ಅಂಗರಕ್ಷಕ ಕಮಾಂಡೆಂಟ್ ಕರ್ನಲ್ ಅನೂಪ್ ತಿವಾರಿ ಅವರ ಜೊತೆಗಿತ್ತು.

ಅಪರೂಪದ ಕುದುರೆ

ಹ್ಯಾನೋವೇರಿಯನ್ ತಳಿಯ ಈ ಕುದುರೆಯನ್ನು ಸುಮಾರು ಎರಡು ದಶಕಗಳ ಹಿಂದೆ ಪಿಬಿಜಿಗೆ ನೀಡಲಾಗಿತ್ತು. ಅತ್ಯಂತ ಶಿಸ್ತಿನ ಕುದುರೆಯಾಗಿದ್ದು, ತನ್ನ ಗಾತ್ರದಿಂದ ಹೆಚ್ಚು ಆಕರ್ಷಕವಾಗಿತ್ತು. ಹಲವು ಬಾರಿ ಮಾಜಿ ರಾಷ್ಟ್ರಪತಿಗಳು ಮತ್ತು ರಾಷ್ಟ್ರಪತಿ ಕೋವಿಂದ್ ಅವರ ಮೆರವಣಿಗೆಗಳಲ್ಲಿ ಬೆಂಗಾವಲು ಪಡೆಯಲ್ಲಿ ಕಾಣಿಸಿಕೊಂಡಿದೆ.

ವಿರಾಟ್ ಅತ್ಯಂತ ವಿಶ್ವಾಸಾರ್ಹ ಪರೇಡ್ ಕುದುರೆಯಾಗಿದ್ದು, ಇಳಿ ವಯಸ್ಸಿನಲ್ಲೂ 2021ರಲ್ಲಿ ರಿಪಬ್ಲಿಕ್ ಡೇ ಪರೇಡ್ ಮತ್ತು ಬೀಟಿಂಗ್ ದಿ ರಿಟ್ರೀಟ್ ಸಮಾರಂಭದಲ್ಲಿ ಅಸಾಧಾರಣ ಪ್ರದರ್ಶನ ನೀಡಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಧವಾರ ಗಣರಾಜ್ಯೋತ್ಸವದ ಪರೇಡ್ ಮುಕ್ತಾಯದ ನಂತರ ಪಿಬಿಜಿ(ರಾಷ್ಟ್ರಪತಿಗಳ ಅಂಗರಕ್ಷಕ ಪಡೆ)ಯು ವಿರಾಟ್ ಕುದುರೆಯ ನಿವೃತ್ತಿಯನ್ನು ಘೋಷಿಸಿತು.

ಜನವರಿ 15 ರಂದು ಭಾರತೀಯ ಸೇನಾ ದಿನದ ಮುನ್ನಾದಿನದಂದು, ವಿರಾಟ್ಗೆ ಸೇನಾ ಮುಖ್ಯಸ್ಥರ ಶ್ಲಾಘನೆ ಸಿಕ್ಕಿದೆ. ಈ ಪ್ರಶಂಸೆಯನ್ನು ಪಡೆದ ಮೊದಲ ಕುದುರೆ ವಿರಾಟ್.

‘ಅದರ ಕುತ್ತಿಗೆಯ ಸುಂದರವಾದ ಆಕರ್ಷಕ ಕಮಾನು, ವೇಗದ ಓಟ, ಕಣ್ಣುಗಳಲ್ಲಿನ ಬುದ್ಧಿವಂತಿಕೆ.. ಹೀಗೆ ವಿರಾಟ್ ಅಂಗರಕ್ಷಕ ಪಡೆಯ ಅಸಾಮಾನ್ಯ ಕುದುರೆಯಾಗಿತ್ತು’ಎಂದು ಪಿಬಿಜಿಯೊಂದಿಗಿದ್ದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.