ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

4ನೇ ಹಂತದಲ್ಲಿ ಮಧ್ಯಾಹ್ನ 2ರ ವರೆಗೆ ಶೇ 38.63ರಷ್ಟು ಮತದಾನ; ಪಶ್ಚಿಮ ಬಂಗಾಳ ಅಧಿಕ

ಲೋಕಸಭಾ ಚುನಾವಣೆ
ಫಾಲೋ ಮಾಡಿ
Comments

ನವದೆಹಲಿ: ಸೋಮವಾರ 72 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಮತದಾನದ ಪ್ರಮಾಣ ಆರು ಗಂಟೆಗಳಲ್ಲಿ ಶೇ 38.63ರಷ್ಟು ದಾಖಲಾಗಿದೆ. ಒಂಬತ್ತು ರಾಜ್ಯಗಳಲ್ಲಿ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ.

ಪಶ್ಚಿಮ ಬಂಗಾಳದ ಕೆಲವು ಕ್ಷೇತ್ರಗಳಲ್ಲಿ ಗಲಾಟೆ, ಇವಿಎಂ ಕಾರ್ಯನಿರ್ವಹಣೆಯಲ್ಲಿ ಅಡಚಣೆ, ಬೆಳಿಗ್ಗೆಯೇ ಮತಗಟ್ಟೆಗೆ ಬಂದ ಗಣ್ಯರು, ಬಿಜೆಪಿ ಪಾಲಿಗೆ ಬಹುಮುಖ್ಯವಾಗಿರುವ ಚುನಾವಣಾ ಹಂತ,..ಹೀಗೆ ಹಲವು ಕಾರಣಗಳಿಂದ ಈ ಹಂತದ ಚುನಾವಣೆ ಸುದ್ದಿಯಾಗುತ್ತಿದೆ.

ಬಾಲಿವುಡ್‌ನ ಬಹುತೇಕ ತಾರೆಯರು, ಉದ್ಯಮಿಗಳು ಹಾಗೂ ರಾಜಕೀಯ ಮುಖಂಡರ ನೆಲೆಯಾಗಿರುವ ಮುಂಬೈ ಲೋಕಸಭಾ ಕ್ಷೇತ್ರಗಳು ಸೆಲೆಬ್ರಿಟಿ ಮತದಾರರಿಂದ ಗಮನಸೆಳೆದಿವೆ. ಆದರೆ, ಮಹಾರಾಷ್ಟ್ರದ 17 ಕ್ಷೇತ್ರಗಳಲ್ಲಿ ಒಟ್ಟು ಶೇ 29.94ರಷ್ಟು ಮತದಾನ ದಾಖಲಾಗಿದೆ.

ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ಅತಿ ಹೆಚ್ಚು ಶೇ 52.37ರಷ್ಟು ಮತದಾನವಾಗಿದೆ.

ಒಂಬತ್ತು ರಾಜ್ಯಗಳ 72 ಕ್ಷೇತ್ರಗಳಲ್ಲಿ ಮತದಾನ

* ಬಿಹಾರ–5 ಕ್ಷೇತ್ರ– ಶೇ 37.71

* ಜಮ್ಮು ಮತ್ತು ಕಾಶ್ಮೀರ–1 ಕ್ಷೇತ್ರ– ಶೇ 6.66

* ಮಧ್ಯ ಪ್ರದೇಶ–6 ಕ್ಷೇತ್ರ– ಶೇ 43.44

* ಮಹಾರಾಷ್ಟ್ರ–17ಕ್ಷೇತ್ರ– ಶೇ 29.94

* ಒಡಿಶಾ–6 ಕ್ಷೇತ್ರ– ಶೇ 35.79

* ರಾಜಸ್ಥಾನ–13 ಕ್ಷೇತ್ರ– ಶೇ 44.62

* ಉತ್ತರ ಪ್ರದೇಶ–13 ಕ್ಷೇತ್ರ– ಶೇ 34.42

* ಪಶ್ಚಿಮ ಬಂಗಾಳ–8ಕ್ಷೇತ್ರ– ಶೇ 52.37

* ಜಾರ್ಖಂಡ್‌–3 ಕ್ಷೇತ್ರ– ಶೇ 44.90

ಇನ್ನಷ್ಟು ಓದು:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT