ನವದೆಹಲಿ: ಅಗಸ್ಟಾವೆಸ್ಟ್ಲ್ಯಾಂಡ್ ಹಗರಣ ಸಂಬಂಧ, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಅವರ ಸೋದರಳಿಯ ರತುಲ್ ಪುರಿ ಗುರುವಾರ ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ವಿಚಾರಣೆಗೆ ಹಾಜರಾದರು.

‘ಪ್ರಕರಣದ ತನಿಖಾಧಿಕಾರಿಯನ್ನು ಪುರಿ ಭೇಟಿಯಾದರು. ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್ಎ) ಅಡಿ ಅವರ ಹೇಳಿಕೆ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ಕಮಲನಾಥ್ ಸೋದರಿ ನೀತಾ ಅವರ ಪುತ್ರ ಪುರಿ, ಹಿಂದುಸ್ತಾನ್ ಪವರ್ಪ್ರಾಜೆಕ್ಟ್ಸ್ ಪ್ರೈ.ಲಿ. ಮಖ್ಯಸ್ಥರಾಗಿದ್ದಾರೆ. ಬಂಧನದಲ್ಲಿ ಇರುವ ಮಧ್ಯವರ್ತಿಸುಶೇನ್ ಮೋಹನ್ ಗುಪ್ತಾ ಜತೆಗೆ ಪುರಿ ಅವರನ್ನು ವಿಚಾರಣೆಗೆ ಒಳಪಡಿಸಲುಇ.ಡಿ ಬುಧವಾರ ಅವರಿಗೆ ಸಮನ್ಸ್ ನೀಡಿತ್ತು.

ಪೂರಕ ಆರೋಪಪಟ್ಟಿ:ಹಗರಣ ಸಂಬಂಧ ಬಂಧನದಲ್ಲಿರುವ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್ ವಿರುದ್ಧ, ಇ.ಡಿ ದೆಹಲಿ ನ್ಯಾಯಾಲಯಕ್ಕೆ ಪೂರಕ ಆರೋಪಪಟ್ಟಿ ಸಲ್ಲಿಸಿದೆ.

ಗ್ಲೋಬಲ್ ಸರ್ವಿಸಸ್ ಎಫ್ಝೆಡ್ಇ ಹಾಗೂ ಗ್ಲೋಬಲ್ ಟ್ರೇಡರ್ಸ್ ಕಂಪನಿಗಳು, ಹಾಗೂ ಇದರ ನಿರ್ದೇಶಕರಲ್ಲಿ ಒಬ್ಬರಾದ ಡೇವಿಡ್ ಸಿಮ್ಸ್ ಹೆಸರನ್ನು ಸಹ ಈ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಮಿಶೆಲ್ ಸಹ ಈ ಕಂಪನಿಯ ನಿರ್ದೇಶಕರಲ್ಲಿ ಒಬ್ಬರು. ಆರೋಪಪಟ್ಟಿಯನ್ನು ಶನಿವಾರ ಪರಿಶೀಲಿಸಲಾಗುವುದು ಎಂದು ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.