ವಯನಾಡ್: ವಯನಾಡ್‌ನಲ್ಲಿ ಭೂಕುಸಿತ ಸಂಭವಿಸಿದ ಗ್ರಾಮಗಳಲ್ಲಿನ ಜನರು ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇತ್ತ ಹಾನಿಗೊಳಗಾದ ಮನೆಗಳಿಗೆ ಕಳ್ಳರು ನುಗ್ಗಿ ಅಳಿದುಳಿದ ವಸ್ತುಗಳನ್ನು ಕದ್ದೊಯ್ಯುತ್ತಿದ್ದಾರೆ ಎಂದು ಜನರು ದೂರಿದ್ದಾರೆ. ಈ ಹಿನ್ನೆಲೆ ಘಟನೆ ನಡೆದ ಸ್ಥಳಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
.Wayanad Landslide: ದುರಂತ ಭೂಮಿಯಲ್ಲಿ ಲೆ. ಕರ್ನಲ್, ನಟ ಮೋಹನ್ ಲಾಲ್.
ದುರಂತ ನಡೆದ ಸ್ಥಳದಲ್ಲಿ ಜನವಸತಿ ಇರದ ಕಾರಣ ಕಳ್ಳರು ಅದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಮನೆಯಲ್ಲಿನ ಮೌಲ್ಯಯುತ ವಸ್ತುಗಳು ಕಳ್ಳತನವಾಗುತ್ತಿವೆ. ಹೀಗಾಗಿ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

‘ಭೂಕುಸಿತದ ಸಂದರ್ಭದಲ್ಲಿ ಪ್ರಾಣ ರಕ್ಷಣೆಗಾಗಿ ಮನೆಗಳನ್ನು ತೊರೆದು ರೆಸಾರ್ಟ್‌ನಲ್ಲಿ ತಂಗಿದ್ದೇವೆ. ಆದರೆ ಪರಿಸ್ಥಿತಿ ಅವಲೋಕನಕ್ಕಾಗಿ ಮನೆಯ ಬಳಿ ತೆರಳಿದ್ದಾಗ ಬಾಗಿಲುಗಳು ಮುರಿದುಕೊಂಡಿತ್ತು, ಬಟ್ಟೆಗಳು ಹಾಗೂ ಕೆಲವು ವಸ್ತುಗಳು ನಾಪತ್ತೆಯಾಗಿವೆ’ ಎಂದು ಸಂತ್ರಸ್ತರೊಬ್ಬರು ಹೇಳಿದ್ದಾರೆ.
.Wayanad Landslide: 24 ಗಂಟೆಯೊಳಗೆ 190 ಅಡಿ ಉದ್ದದ ಸೇತುವೆ ನಿರ್ಮಿಸಿದ ಸೇನೆ.Wayanad Landslide | ದುರಂತಕ್ಕೆ ನಾಡಜನರ ಮಿಡಿತ.
ಚೂರಲ್‌ಮಲ, ಮುಂಡಕ್ಕೈ ಗ್ರಾಮಗಳಲ್ಲಿ ಅವಶೇಷಗಳಡಿ ಸಿಲುಕಿರುವ ಮೃತದೇಹಗಳ ಪತ್ತೆ ಕಾರ್ಯ ಮುಂದುವರಿದಿದ್ದು, ರಾತ್ರಿ ಹೊತ್ತು ಪೊಲೀಸರ ಅನುಮತಿಯಿಲ್ಲದೆ ಗ್ರಾಮಕ್ಕೆ ಯಾರಿಗೂ ಪ್ರವೇಶವಿಲ್ಲ. ಹೀಗಿದ್ದೂ ಕಳ್ಳತನ ಪ್ರಕರಣಗಳ ಬಗ್ಗೆ ದೂರು ಬಂದ ಹಿನ್ನೆಲೆ ರಾತ್ರಿ ವೇಳೆ ಗಸ್ತಿಗೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.Wayanad Landslide | 218 ಮೃತದೇಹಗಳು ಪತ್ತೆ.Wayanad Landslide | ಮನಮಿಡಿದ ನಾಡಿನಲ್ಲಿ ಸೌಹಾರ್ದದ ‘ಸಂಸ್ಕಾರ’.Wayanad landslide| ಕ್ಲೈಮ್ ಮೊತ್ತ ತ್ವರಿತವಾಗಿ ನೀಡಿ: ವಿಮಾ ಕಂಪನಿಗಳಿಗೆ ಸೂಚನೆ.Wayanad Landslides | ಬಂಧುಗಳಿಗಾಗಿ ಹುಡುಕಾಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.