ಕೋಲ್ಕತ್ತ: ದುರ್ಗಾ ಪೂಜೆಯ ವೇಳೆಯಲ್ಲಿ ಜೈಲಿನಲ್ಲಿರುವ ಕೈದಿಗಳಿಗೆ ಮಟನ್ ಬಿರಿಯಾನಿ, ಬಸಂತಿ ಪಲಾವ್ ಸೇರಿ ಹಲವು ಬೆಂಗಾಲಿ ಖಾದ್ಯಗಳನ್ನು ನೀಡಲು ಪಶ್ಚಿಮ ಬಂಗಾಳದ ಗೃಹ ಇಲಾಖೆ ನಿರ್ಧರಿಸಿದೆ. ಹಬ್ಬದ ಸಂತೋಷವನ್ನು ಕೈದಿಗಳೂ ಅನುಭವಿಸಬೇಕು ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
.ಕೋಲ್ಕತ್ತ ಆರ್.ಜಿ.ಕರ್ ಆಸ್ಪತ್ರೆಯ ವೈದ್ಯರಿಗೆ ಬೆದರಿಕೆ: ವ್ಯಕ್ತಿ ಬಂಧನ.
ದುರ್ಗಾ ಪೂಜೆ ಆರಂಭವಾಗುವ ಅಕ್ಟೋಬರ್ 9ರಿಂದ ಅಕ್ಟೋಬರ್ 12ರವರೆಗೆ ಕೈದಿಗಳಿಗೆ ಹಾಗೂ ವಿಚಾರಣಾಧೀನ ಕೈದಿಗಳಿಗೆ ನೀಡುವ ಮಧ್ಯಾಹ್ನ ಹಾಗೂ ರಾತ್ರಿ ಊಟದ ಮೆನುವಿನಲ್ಲಿ ವಿಶೇಷ ಖಾದ್ಯಗಳು ಇರಲಿವೆ.

‘ಪ್ರತಿ ಹಬ್ಬದ ಸಮಯದಲ್ಲಿ ಉತ್ತಮ ಆಹಾರಕ್ಕಾಗಿ ಕೈದಿಗಳಿಂದ ವಿನಂತಿಗಳು ಬರುತ್ತವೆ. ನಾವು ಈ ವರ್ಷ ಹೊಸ ಮೆನು ಸಿದ್ದಪಡಿಸಿದ್ದೇವೆ. ಇದು ಅವರ ಮುಖದಲ್ಲಿ ನಗು ತರುತ್ತದೆ ಎನ್ನುವ ಭರವಸೆ ಇದೆ. ವೈಯಕ್ತಿಕವಾಗಿ ಅವರನ್ನು ಸುಧಾರಿಸಲು ಇದು ಅತ್ಯಂತ ಸಕಾರಾತ್ಮಕ ಕ್ರಮವೆಂದು ನಾನು ಭಾವಿಸುತ್ತೇನೆ’ ಎಂದು ಅಧಿಕಾರಿ ಹೇಳಿದ್ದಾರೆ.
.ಕೋಲ್ಕತ್ತ ಅತ್ಯಾಚಾರ ಪ್ರಕರಣ: ಬಂಗಾಳ ಸರ್ಕಾರದ ನಿಧಾನಗತಿಗೆ ಕೋರ್ಟ್ ಅತೃಪ್ತಿ.
ಅಡುಗೆ ಕೆಲಸ ಮಾಡುವ ಕೈದಿಗಳೇ ಈ ವಿಶೇಷ ಖಾದ್ಯಗಳನ್ನು ತಯಾರಿಸಲಿದ್ದಾರೆ.

ಮೀನು ಸಾರು, ಪೂರಿ, ಬೆಂಗಾಳಿ ಚನಾ ದಾಲ್, ಬೆಂಗಾಳಿ ಗಂಜಿ, ಕೋಳಿ ಸಾರು, ಸೋರೆಕಾಯಿ ಮತ್ತು ಆಲೂಗಡ್ಡೆಯೊಂದಿಗೆ ಸಿಗಡಿ, ರಾಯಿತಾ, ಬಸಂತಿ ಪುಲಾವ್ ಜೊತೆ ಮಟನ್ ಬಿರಿಯಾನಿ ಮೆನುವಿನಲ್ಲಿ ಇರಲಿದೆ ಎಂದು ಅವರು ತಿಳಿಸಿದ್ದಾರೆ.
.ಕೋಲ್ಕತ್ತ| ಅಂಚೆ ಕಚೇರಿಯ ಮಹಿಳಾ ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ: ಆರೋಪಿ ಬಂಧನ.
ಆದಾಗ್ಯೂ, ಕೈದಿಗಳ ಧಾರ್ಮಿಕ ಭಾವನೆಯನ್ನು ಗೌರವಿಸಲು ಎಲ್ಲರಿಗೂ ಮಾಂಸಾಹಾರವನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

ಅನೇಕ ಬಂಗಾಳಿಗಳಿಗೆ ಅಥವಾ ರಾಜ್ಯದಲ್ಲಿ ವರ್ಷಗಳಿಂದ ವಾಸಿಸುವ ವಿವಿಧ ಸಮುದಾಯಗಳ ಜನರಿಗೆ, ದುರ್ಗಾ ಪೂಜೆ ಮತ್ತು ಇತರ ಹಬ್ಬಗಳ ವೇಳೆ ತಮ್ಮ ತಟ್ಟೆಯಲ್ಲಿ ಮೀನು ಮತ್ತು ಮಾಂಸದ ಪದಾರ್ಥಗಳಿಲ್ಲದೆ ಅಪೂರ್ಣವಾಗುತ್ತವೆ. ಆದ್ದರಿಂದ ನಾವು ಅವರ ಪಾಕಪದ್ಧತಿಯಲ್ಲಿ ವೈವಿಧ್ಯತೆಯನ್ನು ತರಲು ಪ್ರಯತ್ನಿಸಿದ್ದೇವೆ. ಬೆಂಗಾಲಿಗಳಾಗಿ ಅವರು ಇದನ್ನು ಆನಂದಿಸುತ್ತಾರೆ ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ.
.ಕೋಲ್ಕತ್ತ: ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟಿದ್ದ ಸ್ಫೋಟಕ ಸಿಡಿದು ವ್ಯಕ್ತಿಗೆ ಗಾಯ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.