ಡೆಹ್ರಾಡೂನ್: ಯುವತಿಯರು ಹರಿದ ಜೀನ್ಸ್ ತೊಡುವ ಬಗ್ಗೆ ವಿವಾದತ್ಮಕ ಹೇಳಿಕೆ ನೀಡಿದ್ದ ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್, ಪಡಿತರ ಕುರಿತಂತೆ ಭಾನುವಾರ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನೈನಿತಾಲ್ನ ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೋವಿಡ್ ಪಿಡುಗಿನ ಈ ಸಮಯದಲ್ಲಿ ಹೆಚ್ಚು ಪಡಿತರ ಪಡೆಯುವ ಸಲುವಾಗಿ ಜನರು ಹೆಚ್ಚು ಮಕ್ಕಳನ್ನು ಹೆರಬೇಕಿತ್ತು’ ಎಂದು ಹೇಳಿದ್ದಾರೆ.

ಓದಿ:ಸ್ತ್ರೀಯರು ಹರಿದ ಜೀನ್ಸ್ ಧರಿಸುವುದು ನಮ್ಮ ಸಂಸ್ಕೃತಿಯೇ?: ತೀರಥ್ಸಿಂಗ್ ರಾವತ್

‘ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ 5 ಕೆ.ಜಿ ಧಾನ್ಯ ನೀಡಲಾಗುತ್ತದೆ. 10 ಜನ ಮಕ್ಕಳಿರುವವರಿಗೆ 50 ಕೆ.ಜಿ. ಧಾನ್ಯ ಸಿಗುತ್ತದೆ. 20 ಜನರಿರುವ ಕುಟುಂಬಕ್ಕೆ ಒಂದು ಕ್ವಿಂಟಲ್ ಸಿಗುತ್ತದೆ’ ಎಂದು ಹೇಳಿದ್ದಾರೆ.

‘ಸಮಯ ಇದ್ದಾಗಲೂ ನೀವು ಇಬ್ಬರು ಮಕ್ಕಳನ್ನು ಮಾತ್ರ ಹೆತ್ತಿರಿ. ಈಗಿನ ನಿಮ್ಮ ಸ್ಥಿತಿಗೆ ಯಾರನ್ನು ದೂಷಿಸಲು ಸಾಧ್ಯ. ನೀವ್ಯಾಕೆ 20 ಮಕ್ಕಳನ್ನು ಹೆರಲಿಲ್ಲ’ ಎಂದೂ ಅವರು ಹೇಳಿದ್ದಾರೆ.

ಓದಿ:ಹರಿದ ಜೀನ್ಸ್ ಹೇಳಿಕೆ: ತೀವ್ರ ಆಕ್ಷೇಪದ ನಂತರ ಕ್ಷಮೆ ಕೋರಿದ ಉತ್ತರಾಖಂಡ ಸಿಎಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.