ವಿಭಿನ್ನ ರೀತಿಯಲ್ಲಿ ಪರಸ್ಪರ ಪ್ರೀತಿ ವ್ಯಕ್ತಪಡಿಸುವುದು ಇತ್ತೀಚಿಗೆ ಟ್ರೆಂಡ್ ಆಗುತ್ತಿದೆ. ಸಮುದ್ರದ ಆಳದಲ್ಲಿ ಪ್ರಪೋಸ್ ಮಾಡುವುದು, ಗಾಳಿಯಲ್ಲಿ ತೇಲಾಡುತ್ತಾ ಪ್ರೀತಿ ವ್ಯಕ್ತಪಡಿಸುವುದು.... ಹೀಗೆ ಅನೇಕ ರೀತಿಯಲ್ಲಿ ಪ್ರೇಮಿಗಳು, ದಂಪತಿಗಳು ತಮ್ಮ ಪ್ರೀತಿಯನ್ನು ತೋರ್ಪಡಿಸುವುದು ಕಾಣುತ್ತಿದ್ದೇವೆ. ಇಲ್ಲೊಬ್ಬ ಮಹಿಳೆ ತನ್ನ ಗಂಡನ ಹೆಸರನ್ನು ಹಣೆ ಮೇಲೆ ಟ್ಯಾಟು ಹಾಕಿಸಿಕೊಂಡು ವಿಶಿಷ್ಟ ರೀತಿಯಲ್ಲಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಟ್ಯಾಟು ಸ್ಟುಡಿಯೊವೊಂದು ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ. ನಿಮ್ಮ ಪ್ರೀತಿಪಾತ್ರರನ್ನು ಟ್ಯಾಗ್ ಮಾಡಿ ಎಂದು ಬರೆದು ಈ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಲವರು ವಿಡಿಯೊ ನೋಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರೀತಿಯನ್ನು ಈ ರೀತಿ ವ್ಯಕ್ತಪಡಿಸುವುದು ಹುಚ್ಚುತನ ಎಂದು ಹೇಳಿದ್ದಾರೆ.

ವಿಡಿಯೊದಲ್ಲಿ ಮಹಿಳೆಯೊಬ್ಬಳು ಟ್ಯಾಟು ಹಾಕಿಸಿಕೊಳ್ಳುತ್ತಿದ್ದು, ಸತೀಶ್ ಎಂಬ ಹೆಸರಿನಲ್ಲಿ ಹಣೆ ಮೇಲೆ ಟ್ಯಾಟು ಹಾಕಿಸಿಕೊಳ್ಳಲು ಹೊರಟಿದ್ದಾರೆ. ಟ್ಯಾಟು ಹಾಕಿಸಿಕೊಳ್ಳುವ ವೇಳೆ ಮಹಿಳೆ ಸ್ವಲ್ಪ ಹಿಂಜರಿಕೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ನೋಡಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಪ್ರಚಾರಕ್ಕಾಗಿ ಟ್ಯಾಟು ಕಂಪನಿ ಇಂತಹ ಸುಳ್ಳುಗಳನ್ನು ಸೃಷ್ಟಿಸುತ್ತಿದೆ. ಇದು ನಿಜವಲ್ಲ‘ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.