ಚೆನ್ನೈ: ತಮ್ಮ ಪಕ್ಷದ ಅಧ್ಯಕ್ಷ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಥವಾ ದ್ರಾವಿಡರ್ ಕಳಗಂ ಮುಖ್ಯಸ್ಥ ಕೆ.ವೀರಮಣಿ ಅವರ ಮುಟ್ಟುವವರ ಕೈ ಕತ್ತರಿಸುತ್ತೇನೆ. ಅದನ್ನು ಮಾಡುವುದು ತಮ್ಮ ಧರ್ಮ ಎಂದು ಹೇಳುವ ಮೂಲಕ ಡಿಎಂಕೆ ಹಿರಿಯ ನಾಯಕ ಟಿ.ಆರ್.ಬಾಲು ಶನಿವಾರ ವಿವಾದಕ್ಕೆ ಕಾರಣರಾಗಿದ್ದಾರೆ.

ಸೇತುಸಮುದ್ರಂ ಹಡಗು ಕಾಲುವೆ ಯೋಜನೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ, ರೈಲನ್ನು ಮಧ್ಯದಲ್ಲಿ ನಿಲ್ಲಿಸಲು ಸರಪಳಿ ಎಳೆದಂತೆ ಯೋಜನೆಯನ್ನು ಹಠಾತ್ ನಿಲ್ಲಿಸಲಾಗಿದೆ ಎಂದರು.

ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂನ ಸೈದ್ಧಾಂತಿಕ ಮಾತೃಸಂಸ್ಥೆಯಾದ ದ್ರಾವಿಡರ್ ಕಳಗಂ (ದ.ಕ) ಶುಕ್ರವಾರ ತಡರಾತ್ರಿ ಪಲಂಗನಾಥಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲು, ತಮ್ಮ ನಾಯಕ ಮತ್ತು ದ.ಕ. ಅಧ್ಯಕ್ಷರನ್ನು ಯಾರಾದರೂ ಮುಟ್ಟುವುದನ್ನು ನಾನು ಸಹಿಸುವುದಿಲ್ಲ ಎಂದು ಹೇಳಿದರು.

‘ನನ್ನ ನಾಯಕ (ಸ್ಟಾಲಿನ್) ಅಥವಾ ಅಯ್ಯ (ವೀರಮಣಿ) ಅವರ ಮುಟ್ಟಿದರೆ ಕೈ ಕತ್ತರಿಸಲು ನಾನು ಹಿಂಜರಿಯುವುದಿಲ್ಲ. ಇದು ನನ್ನ ಧರ್ಮ, ಇದು ಸರಿಯಲ್ಲ ಎಂದು ನಿಮಗೆ ಅನಿಸಿದರೆ, ನೀವು ನ್ಯಾಯಾಲಯಕ್ಕೆ ಹೋಗಿ. ಹಾಗೆ ಹೇಳಬಹುದು. ಆದರೆ, ಅಷ್ಟರೊಳಗೆ ನಾನೇ ಆ ಕೆಲಸ ಮಾಡ್ತೀನಿ’ ಎಂದು ಬಾಲು ನಸುನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.