ನವದೆಹಲಿ: ಭಾರತ ಮತ್ತು ನೇಪಾಳ ದೇಶಗಳು ತಮ್ಮ ನಡುವಿನ ಬಾಂಧವ್ಯವನ್ನು ಹಿಮಾಲಯದ ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸಲಿವೆ. ಗಡಿ ಸಮಸ್ಯೆಗಳು ಮತ್ತು ಅದಕ್ಕೆ ಸಂಬಂಧಿಸಿದ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನೇಪಾಳ ಪ್ರಧಾನಿ ಪುಷ್ಪಕಮಲ ದಹಾಲ್ ಪ್ರಚಂಡ ಅವರ ಜೊತೆ ವಿಸ್ತೃತ ಮಾತುಕತೆ ಬಳಿಕ ಮೋದಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

ಉಭಯ ದೇಶಗಳ ನಡುವಿನ ಒಪ್ಪಂದವನ್ನು ಭವಿಷ್ಯದಲ್ಲಿ ಸೂಪರ್ ಹಿಟ್ ಮಾಡುವ ಉದ್ದೇಶದಿಂದ ನಾನು ಮತ್ತು ನೇಪಾಳ ಪ್ರಧಾನಿ ಪ್ರಚಂಡ ಹಲವು ಮುಖ್ಯ ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಜೊತೆಗೆ, ಉಭಯ ನಾಯಕರು ರಿಮೋಟ್ ಮೂಲಕ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ವಿವಿಧ ವಲಯಗಳಲ್ಲಿ ಸಹಕಾರ ವೃದ್ಧಿಸುವ ಉದ್ದೇಶದಿಂದ ಎರಡೂ ರಾಷ್ಟ್ರಗಳು ಏಳು ಒಪ್ಪಂದಗಳಿಗೆ ಸಹಿ ಹಾಕಿವೆ. ಇದರಲ್ಲಿ ಅಂತರ್ ಗಡಿ ಪೆಟ್ರೋಲಿಯಂ ಪೈಪ್‌ಲೈನ್, ಚೆಕ್ ಪೋಸ್ಟ್‌ಗಳ ಅಭಿವೃದ್ಧಿ ಮತ್ತು ಜಲವಿದ್ಯುತ್ ಉತ್ಪಾದನೆಯಲ್ಲಿ ಸಹಕಾರದ ವಿಷಯಗಳೂ ಸೇರಿವೆ. ಇದರಲ್ಲಿ ಪ್ರಮುಖವಾದುದು, ಪರಿಷ್ಕೃತ ಸಾರಿಗೆ ಒಪ್ಪಂದ.

‘9 ವರ್ಷಗಳ ಹಿಂದೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಾನು ಮೊದಲು ಭೇಟಿ ಕೊಟ್ಟಿದ್ದು ನೇಪಾಳಕ್ಕೆ. ಅದೇ ವೇಳೆ, ಭಾರತ–ನೇಪಾಳಕ್ಕೆ ಹೈವೇಸ್, ಐ–ವೇಸ್ ಮತ್ತು ಟ್ರಾನ್ಸ್–ವೇಸ್ ಹಿಟ್ ಫಾರ್ಮುಲಾ ನೀಡಿದ್ದೆ’ ಎಂದು ಮೋದಿ ಹೇಳಿದ್ದಾರೆ.

ಪೆಟ್ರೋಲ್ ಪೈಪ್‌ಲೈನ್ ಯೋಜನೆಯನ್ನು ಗಡಿಯಾಚೆಗೂ ವಿಸ್ತರಿಸುವುದು, ಜಲವಿದ್ಯುತ್ ಯೋಜನೆ ಜಾರಿಗೊಳಿಸುವುದು, ಚೆಕ್‌ಪೋಸ್ಟ್‌ಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಏಳು ಒಪ್ಪಂದಗಳಿಗೆ ಎರಡೂ ದೇಶಗಳ ನಾಯಕರು ಸಹಿ ಹಾಕಿದ್ದಾರೆ. ಸಾಗಣೆ ಕ್ಷೇತ್ರದ ಪರಿಷ್ಕೃತ ಒಪ್ಪಂದಕ್ಕೂ ಸಹಿ ಹಾಕಲಾಗಿದೆ ಎಂದೂ ಮೂಲಗಳು ಹೇಳಿವೆ.

ಒಂಬತ್ತು ವರ್ಷಗಳ ಹಿಂದೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನೇಪಾಳದ ಜೊತೆಗಿನ ಸಂಬಂಧ ವೃದ್ಧಿಗೆ ಆದ್ಯತೆ ನೀಡಿರುವುದನ್ನು ಮೋದಿ ಅವರು ಉಲ್ಲೇಖಿಸಿದ್ದಾರೆ. ಪ್ರಧಾನಿಯಾದ ಮೂರು ತಿಂಗಳೊಳಗೆ ನೇಪಾಳಕ್ಕೆ ಭೇಟಿ ನೀಡಿದ್ದನ್ನೂ ಸ್ಮರಿಸಿದ್ದಾರೆ.

ಮಾತುಕತೆಯ ಅಂಗವಾಗಿ ಉಭಯ ನಾಯಕರು ಭಾರತದ ರೂಪಾಯಿದಿಹಾ ಮತ್ತು ನೇಪಾಳದ ನೇಪಾಳಗಂಜ್‌ನ ಚೆಕ್‌ಪೋಸ್ಟ್‌ಗಳನ್ನು ವರ್ಚುವಲ್ ಆಗಿ ಉದ್ಘಾಟಿಸಿದರು. ಬಿಹಾರದ ಬಥನಾಹಾದಿಂದ ನೇಪಾಳಕ್ಕೆ ತೆರಳಲಿರುವ ಸರಕು ಸಾಗಣೆ ರೈಲಿಗೂ ಹಸಿರು ನಿಶಾನೆ ತೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.