ತಿರುವನಂತಪುರ: ಸಾಂಪ್ರದಾಯಿಕ ದಿರಿಸು ತೊಟ್ಟು, ಮನೆಯಂಗಳದಲ್ಲಿ ಪೂಕ್ಕಳಂ (ಹೂವಿನ ರಂಗೋಲಿ) ಹಾಕಿ, ಬಗೆ ಬಗೆಯ ವಿಶೇಷ ಖಾದ್ಯಗಳ ಭೋಜನ (ಸದ್ಯ) ಸವಿದು ಕೇರಳಿಗರು ಸಂಭ್ರಮದಿಂದ ಓಣಂ ಹಬ್ಬ ಆಚರಿಸಿದರು.

ಹತ್ತು ದಿನಗಳ ಹಬ್ಬದಲ್ಲಿ ‘ತಿರು ಓಣಂ’ ಪ್ರಮುಖವಾಗಿದ್ದು, ‘ತಿರು ಓಣಂ’ ದಿನವಾದ ಮಂಗಳವಾರ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.

ಮಕ್ಕಳು ಮತ್ತು ಯುವಕ, ಯುವತಿಯರು ತಮ್ಮ ಮನೆಗಳನ್ನು ಅಲಂಕರಿಸಿ ವಿವಿಧ ಬಣ್ಣಗಳ ಹೂವುಗಳಿಂದ ವಿವಿಧ ವಿನ್ಯಾಸದ ‘ಪೂಕ್ಕಳಂ’ ಹಾಕಿ ಹಬ್ಬದ ಸಡಗರವನ್ನು ಹೆಚ್ಚಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಅಂಗವಾಗಿ ಮನೆಗಳ ಆವರಣಗಳಲ್ಲಿ ಮಹಿಳೆಯರು ಉಯ್ಯಾಲೆಯಾಡಿ ಸಂಭ್ರಮಿಸಿದರು.

ರಾಜ್ಯದಾದ್ಯಂತ ವಿವಿಧ ಸಂಘಟನೆಗಳು ಸಾಂಪ್ರದಾಯಿಕ ಸ್ಪರ್ಧೆಗಳನ್ನು ಏರ್ಪಡಿಸಿದ್ದವು. ಹುಲಿವೇಷ (ಪುಲಿಕ್ಕಳಿ), ‘ತಿರುವಾದಿರ’ ನೃತ್ಯ ಹಬ್ಬದ ಮೆರುಗು ಹೆಚ್ಚಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.