ಮೀರತ್:ಮುಸ್ಲಿಮ್ ಹುಡುಗನ ಜೊತೆ ಕುಳಿತ ಯುವತಿಗೆ ಪೊಲೀಸರು ಮನಬಂದಂತೆ ಥಳಿಸಿದ್ದ ಘಟನೆ ಉತ್ತರಪ್ರದೇಶದ ಮೀರತ್‌ನಲ್ಲಿಎರಡು ದಿನಗಳ ಹಿಂದೆ ನಡೆದಿದ್ದು,ಈ ಸಂಬಂಧ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಸೇರಿದಂತೆ ನಾಲ್ವರು ಪೊಲೀಸರನ್ನು ಮಂಗಳವಾರ ಅಮಾನತುಗೊಳಿಸಲಾಗಿದೆ.

ಪೊಲೀಸ್ ಕಾನ್‌ಸ್ಟೆಬಲ್‌ಯುವತಿ ಮೇಲೆ ನಡೆಸಿದ ಹಲ್ಲೆ ಹಾಗೂನಿಂದನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಏನಿದು ಘಟನೆ?
ಯುವತಿ ಹಾಗೂ ಆಕೆಯ ಸ್ನೇಹಿತನ ಜೊತೆ ಮೀರತ್‌ನ ಮೆಡಿಕಲ್ ಪ್ರದೇಶದಲ್ಲಿ ಕುಳಿತಿದ್ದ ವೇಳೆಸ್ಥಳೀಯರು ಹಾಗೂ ವಿಶ್ವ ಹಿಂದೂ ಪರಿಷತ್ ಸದಸ್ಯರಕಣ್ಣಿಗೆ ಬಿದ್ದಿದ್ದಾರೆ. ಆಕ್ಷೇಪಾರ್ಹ ರೀತಿಯಲ್ಲಿಕುಳಿತಿರುವುದಾಗಿ ಪ್ರಶ್ನಿಸಿದಮಂದಿ ಅವರಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುವತಿಯನ್ನು ಜೀಪಿನಲ್ಲಿ ಕರೆದುಕೊಂಡುಹೋಗುತ್ತಿದ್ದ ನಾಲ್ವರು ಪೊಲೀಸರಲ್ಲಿ ಒಬ್ಬ ಮೊಬೈಲ್‌ನಲ್ಲಿ ವಿಡಿಯೊ ಚಿತ್ರಿಕರಿಸುತ್ತಾ, ಇಲ್ಲಿ ಯಾರ ಮನೆಯಲ್ಲಿ ಇದ್ದೀಯಾ? ನಿನಗೆ ಮುಲ್ಲಾ ಇಷ್ಟವಾದನೇ? (“Toh mulla zyada pasand aa raha,(so you like a Mulla more?) ಒಬ್ಬ ಹಿಂದೂ ಹುಡುಗಿಯಾಗಿ ಮುಸ್ಲಿಂ ಮನೆಯಲ್ಲಿ ಇರ್ತಿಯಾ.ನಿನಗೆ ನಾಚಿಕೆಯಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಒಬ್ಬ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಯುವತಿಯ ತಲೆಗೆ ಮನಬಂದಂತೆ ಹೊಡೆದಿದ್ದಾರೆ. ಮತ್ತೊಬ್ಬ ಪೊಲೀಸ್ ಸಿಬ್ಬಂದಿಮುಖಕ್ಕೆ ಹಾಕಿದ್ದ ಬಟ್ಟೆಯನ್ನು ಒತ್ತಾಯದಿಂದ ತೆಗೆದಿದ್ದಾರೆ.

ಯುವತಿ ಹಾಗೂ ಆತ ವೈದ್ಯಕೀಯ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ಹುಡುಗನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಯುವತಿಯ ತಂದೆಗೆ ವಿಎಚ್‌ಪಿ ಸದಸ್ಯರು ಒತ್ತಾಯಿಸಿದ್ದು, ಅವರು ದೂರು ನೀಡಲು ಒಪ್ಪಿಲ್ಲ. ಅದು ಸಂದರ್ಭದ ತಪ್ಪು ಗ್ರಹಿಕೆಯಾಗಿದೆ ಎಂದು ಪ್ರತಿಕ್ರಿಯಿಸಿರುವುದಾಗಿಇಂಡಿಯಾ ಟುಡೇ ವರದಿ ಮಾಡಿದೆ.

ಸಾರ್ವಜನಿಕರು ಪೊಲೀಸರ ಇಂತಹ ವರ್ತನೆಯನ್ನು ಒಪ್ಪುವುದಿಲ್ಲ. ಇದೊಂದು ಕ್ಷಮಿಸಲಾಗದ ಅಪರಾಧ ಎಂದು ಮೀರತ್‌ನ ಎಸ್‌ಪಿ ರಾಣವಿಜಯ್ ಸಿಂಗ್ ಗೃಹ ರಕ್ಷಕದಳ ಇಲಾಖೆಗೆ ಪತ್ರ ಬರೆದಿದ್ದಾರೆ.

ಯುವಕ ಹಾಗೂ ಯುವತಿ ವಿರುದ್ಧ ದೂರು ದಾಖಲಾಗಿಲ್ಲ.ಬಲಪಂಥೀಯ ಸಂಘಟನೆ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಯುವಕ ಯುತಿಯರನ್ನು ಬಂಧಿಸಿದ ಪೊಲೀಸರು ವೈದ್ಯಕೀಯ ಪರೀಕ್ಷೆ ನಂತರ ಪೋಷಕರಿಗೆ ಒಪ್ಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.