ಠಾಣೆ: ಮೆಟ್ರೊ ಕಾಮಗಾರಿ ಸ್ಥಳದಲ್ಲಿ ಭಾರವಾದ ಲೋಹ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ನಗರದ ಹೆದ್ದಾರಿ ಪಕ್ಕದ ಮಾಲ್ ಬಳಿ ಘಟನೆ ಸಂಭವಿಸಿದೆ. ಚಿಂದಿ ಆಯುವ ಮಹಿಳೆ ಕಾಮಗಾರಿ ನಡೆಯುತ್ತಿದ್ದ ಮೆಟ್ರೊ ಹಳಿಯ ಕೆಳಗಿದ್ದರು. ಆಗ ಭಾರವಾದ ಲೋಹದ ತುಂಡೊಂದು ಮಹಿಳೆ ಮೇಲೆ ಬಿದ್ದಿದೆ ಎಂದು ಥಾಣೆ ನಗರ ಪಾಲಿಕೆಯ ಸ್ಥಳೀಯ ವಿಪತ್ತು ನಿರ್ವಹಣಾ ಘಟಕದ(ಆರ್ಎಂಡಿಸಿ) ಮುಖ್ಯಸ್ಥ ಅವಿನಾಶ್ ಸಾವಂತ್ ಹೇಳಿದ್ದಾರೆ.

ಮಹಿಳೆ ಬ್ಯಾರಿಕೇಡ್ ಅನ್ನು ದಾಟಿ ಪಿಲ್ಲರ್ಗಾಗಿ ಅಗೆದ ಗುಂಡಿ ಪ್ರವೇಶಿಸಿದಾಗ ವಸ್ತು ಅವರ ಮೇಲೆ ಬಿದ್ದಿದೆ ಎಂದು ರಾಬೋಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಮತ್ತು ಆರ್ಡಿಎಂಸಿ ತಂಡ ಸ್ಥಳಕ್ಕೆ ಧಾವಿಸಿ ಮಹಿಳೆ ಶವವನ್ನು ಗುಂಡಿಯಿಂದ ಹೊರತೆಗೆದಿದೆ. ಸುನೀತಾ ಕಾಂಬಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಮಹಿಳೆ ಎಂದು ಸಾವಂತ್ ತಿಳಿಸಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.