ತಿರುವನಂತಪುರ: ಅಕ್ಯುಪಂಕ್ಚರ್ ಚಿಕಿತ್ಸೆ(ಸೂಜಿ ಚಿಕಿತ್ಸೆ) ಮೂಲಕ ಮನೆಯಲ್ಲಿಯೇ ಹೆರಿಗೆ ಮಾಡಿಸಲು ಪತಿ ಒತ್ತಾಯಿಸಿದ ಪರಿಣಾಮ ತಾಯಿ ಹಾಗೂ ನವಜಾತ ಶಿಶು ಇಬ್ಬರು ಮೃತಪಟ್ಟಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.
.ಮೋದಿಯ ರಾಮರಾಜ್ಯದಲ್ಲಿ ದಲಿತರು, ಹಿಂದುಳಿದವರಿಗೆ ಉದ್ಯೋಗ ಸಿಗಲ್ಲ: ರಾಹುಲ್ ಗಾಂಧಿ.ಎಲ್ಲಾ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ: ಸರ್ಕಾರದ ತಿದ್ದುಪಡಿ ಆದೇಶ.
ಮೃತ ಮಹಿಳೆಯನ್ನು ಕರಕ್ಕಮಂಡಪಂನ ಶಮೀರಾ (36) ಎಂದು ಗುರುತಿಸಲಾಗಿದೆ.

ಮೂರು ಮಕ್ಕಳ ತಾಯಿ ಆಗಿದ್ದ ಶಮೀರಾ, ನಾಲ್ಕನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಹೆರಿಗೆ ಸಮಯದಲ್ಲಿ ಆಕೆಯನ್ನು ಆಸ್ಪತ್ರೆಗೆ ತೆರಳದಂತೆ ಹಾಗೂ ವೈದ್ಯಕೀಯ ಚಿಕಿತ್ಸೆ ಪಡೆಯದಂತೆ ಪತಿ ಹೇಳಿದ್ದ. ಮನೆಯಲ್ಲಿಯೇ ಮಹಿಳೆಯೊಬ್ಬರ ಸಹಾಯದಿಂದ ಸೂಜಿ ಚಿಕಿತ್ಸೆಯ(ಅಕ್ಯುಪಂಕ್ಚರ್) ಮೂಲಕ ಹೆರಿಗೆ ಮಾಡಿಸಿದ್ದಾನೆ. ಈ ವೇಳೆ ತಾಯಿ ಹಾಗೂ ಶಿಶು ಮೃತಪಟ್ಟಿದ್ದಾರೆ.

ಶಮೀರಾ ಅವರನ್ನು ಗರ್ಭಾವಸ್ಥೆ ಸಮಯದಲ್ಲೂ ಸರಿಯಾಗಿ ಆಕೆಯ ಪತಿ ನಯಾಸ್ ನೋಡಿಕೊಂಡಿಲ್ಲ. ಔಷಧಗಳನ್ನು ತೆಗೆದುಕೊಳ್ಳದಂತೆ ಸೂಚಿಸಿದ್ದ. ಆಸ್ಪತ್ರೆಗೆ ಹೋಗದಂತೆಯೂ ಬೆದರಿಕೆ ಹಾಕಿದ್ದ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
.ಕೆಲಸದ ಆಮಿಷ: ನಟಿ ವಿದ್ಯಾಬಾಲನ್ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ.
ಈ ಸಂಬಂಧ ಮಾತನಾಡಿದ ಸಚಿವೆ ವೀಣಾ ಜಾರ್ಜ್, ಆರೋಪಿ ಪತಿ ನಯಾಸ್‌ನನ್ನು ಈಗಾಗಲೇ ಬಂಧಿಸಲಾಗಿದ್ದು, ತಾಯಿ ಹಾಗೂ ಶಿಶು ಸಾವಿಗೆ ಕಾರಣರಾದ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಘಟನೆಯನ್ನು ನರ ಹತ್ಯೆ ಎಂದೇ ಪರಿಗಣಿಸಲಾಗುವುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.