ಶಿಮ್ಲಾ: ಹಿಮಾಚಲ ಪ್ರದೇಶದ ಮನಾಲಿಯ ಖಾಸಗಿ ಹೋಟೆಲ್ ಒಂದರ ಬಳಿ ಬ್ಯಾಗ್ನಲ್ಲಿ ಯುವತಿಯ ಮೃತದೇಹ ಪತ್ತೆಯಾಗಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮೃತರನ್ನು ಮಧ್ಯಪ್ರದೇಶದ ಭೋಪಾಲ್ ಮೂಲದ 26 ವರ್ಷದ ಯುವತಿ ಎಂದು ಗುರ್ತಿಸಲಾಗಿದ್ದು, ಈಕೆ ಕಳೆದ ಸೋಮವಾರ ಆರೋಪಿ ವ್ಯಕ್ತಿಯೊಂದಿಗೆ ಹೋಟೆಲ್ಗೆ ಆಗಮಿಸಿದ್ದರು. ಮೃತ ಯುವತಿಯ ಹೆಸರಿನಲ್ಲಿಯೇ ಹೋಟೆಲ್ ರೂಮ್ ಬುಕ್ ಆಗಿದ್ದ ಕಾರಣ ಆರಂಭದಲ್ಲಿ ಆರೋಪಿಗೆ ಸಂಬಂಧಿಸಿದ ಯಾವುದೇ ವಿವರ ಸಿಕ್ಕಿರಲಿಲ್ಲ. ಕೃತ್ಯದ ಬಳಿಕ ಹೋಟೆಲ್ನಿಂದ ಪರಾರಿಯಾಗಿದ್ದ ಶಂಕಿತ ಆರೋಪಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ಡಿವೈಎಸ್ಪಿ ಕೆ.ಡಿ. ಶರ್ಮಾ ಅವರು ತಿಳಿಸಿದ್ದಾರೆ.

ಬುಧವಾರ ಸಂಜೆ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ವ್ಯಕ್ತಿಯೊಬ್ಬ ಸಂಶಯಾಸ್ಪದ ರೀತಿಯಲ್ಲಿ ಬೃಹತ್ ಬ್ಯಾಗ್ ಒಂದನ್ನು ಕೊಂಡೊಯ್ಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬ್ಯಾಗ್ನಲ್ಲಿದ್ದ ಯುವತಿಯ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಮೃತ ಯುವತಿ ಮತ್ತು ಕೊಲೆ ಆರೋಪಿಯ ನಡುವಿನ ಸಂಬಂಧವಾಗಲಿ, ಕೊಲೆ ಹಿಂದಿನ ಕಾರಣವಾಗಲಿ ಇದುವರೆಗೆ ತಿಳಿದುಬಂದಿಲ್ಲ. ಐಪಿಸಿ ಸೆಕ್ಷನ್ 302ರ(ಕೊಲೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು ಶರ್ಮಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.