ನವದೆಹಲಿ: ಮಹಿಳೆಯರೂ ಅಧಿಕ ಪ್ರಮಾಣದಲ್ಲಿ ಮದ್ಯಸೇವನೆಗೆ ಮಾಡುತ್ತಿರುವುದು, ದೇಶದ ಮದ್ಯಸೇವನೆ ಪ್ರಮಾಣ ಹೆಚ್ಚಳಕ್ಕೆ ಒಂದು ಕಾರಣವಾಗಿದೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ.

ದೆಹಲಿಯಲ್ಲಿ ನಡೆದ ಸಮೀಕ್ಷೆಯು ಅಲ್ಲಿನ ಮಹಿಳೆಯರ ಮದ್ಯಸೇವನೆ ವಿಧಾನದ ಚಿತ್ರಣ ಕೊಟ್ಟಿದೆ. ಕಮ್ಯುನಿಟಿ ಅಗೈನ್ಸ್ಟ್ ಡ್ರಂಕನ್ ಡ್ರೈವಿಂಗ್ (ಸಿಎಡಿಡಿ) ಈ ಸಮೀಕ್ಷೆ ನಡೆಸಿದೆ

5,000 ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, 18–70 ವರ್ಷ ವಯಸ್ಸಿನವರನ್ನುಸಮೀಕ್ಷೆಗೆ ಪರಿಗಣಿಸಲಾಗಿದೆ. ಈ ಪೈಕಿ ದೆಹಲಿಯ ಶೇ 20ರಷ್ಟು (ಸುಮಾರು 15 ಲಕ್ಷ) ಮಹಿಳೆಯರು ಮದ್ಯ ಸೇವಿಸುತ್ತೇವೆ ಎಂದು ಹೇಳಿದ್ದಾರೆ.

ಮದ್ಯದತ್ತ ಒಲವು ಹೆಚ್ಚಲು ಕಾರಣಗಳು

* ಬಹುತೇಕ ಸಾಮಾಜಿಕ ಒಡನಾಟಗಳು ಮದ್ಯಸೇವನೆ ಸುತ್ತವೇ ರೂಪುಗೊಂಡಿವೆ. ಈ ವಿಚಾರದಲ್ಲಿ ಮದ್ಯವು ಒಂದು ಮಾಧ್ಯಮವಾಗಿ ಕೆಲಸ ಮಾಡುತ್ತದೆ. ಎಲ್ಲರೂ ಮದ್ಯ ಸೇವಿಸುವಾಗ, ತಾವೂ ಸೇವಿಸುವುದರಲ್ಲಿ ತಪ್ಪೇನೂ ಇಲ್ಲ. ಇದು ಸಾಮಾನ್ಯ ಎಂಬಂತಾಗಿದೆ

* ಕಾಕ್‌ಟೇಲ್ ಮತ್ತು ಬೆರ್ರಿ ಸೇವನೆಯಿಂದ ಮಹಿಳೆಯರಿಗೆ ವಿಶ್ರಾಂತಿ ದೊರೆಯುತ್ತದೆ ಎಂಬ ಪ್ರತಿಪಾದನೆ ಜನಪ್ರಿಯತೆ ಪಡೆದಿದೆ

* ವೃತ್ತಿ ಒತ್ತಡ, ಖಿನ್ನತೆ, ಏಕಾಂತಗಳನ್ನು ದೂರ ಮಾಡುವ ಸಾಧನವಾಗಿಯೂ ಮದ್ಯವನ್ನು ಮಹಿಳೆಯರು ಬಳಸುತ್ತಿದ್ದಾರೆ

* 43.7 % - ಮದ್ಯಸೇವನೆ ಹವ್ಯಾಸ ಎಂದವರ (18–30 ವರ್ಷ ವಯಸ್ಸು) ಪ್ರಮಾಣ

* 41.7 % - ಮದ್ಯಸೇವನೆ ಸಾಮಾಜಿಕ ಅಗತ್ಯವಾಗಿದೆ ಎಂದವರ (31–45 ವರ್ಷದವರು) ಪ್ರಮಾಣ

* 53 % - ಭಾವನಾತ್ಮಕ ಕಾರಣಗಳಿಂದಾಗಿ ಮದ್ಯ ಸೇವಿಸುತ್ತೇವೆ ಎಂದವರ (60 ವರ್ಷಕ್ಕಿಂತ ಹಿರಿಯರು) ಪ್ರಮಾಣ

* 39.1 % - ಭಾವನಾತ್ಮಕ ಕಾರಣಗಳಿಂದಾಗಿ ಮದ್ಯ ಸೇವಿಸುತ್ತೇವೆ ಎಂದವರ (40–60 ವರ್ಷದವರು) ಪ್ರಮಾಣ

* 4 + ಪೆಗ್‌ಗಳನ್ನು ಒಮ್ಮೆ ಸೇವಿಸುತ್ತೇವೆ ಎಂದು 18–30 ವರ್ಷದ ಶೇ 45.6 % ಮಹಿಳೆಯರು ಹೇಳಿದ್ದಾರೆ. 46–60 ವರ್ಷದವರಲ್ಲಿ ಈ ಪ್ರಮಾಣ ಶೇ 22ರಷ್ಟು ಇದೆ. 60 ವರ್ಷಕ್ಕಿಂತಲೂ ಹೆಚ್ಚಿನ ಹಿರಿಯರಲ್ಲಿ ಈ ಪ್ರಮಾಣ ಶೇ 24.6ರಷ್ಟಿದೆ

* 3–4 ಪೆಗ್‌ಗಳನ್ನುಒಮ್ಮೆ ಸೇವಿಸುತ್ತೇವೆ ಎಂದು 31–45 ವರ್ಷದ ಶೇ 45.6 % ಮಹಿಳೆಯರು ಹೇಳಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.