ನವದೆಹಲಿ: ಭಾರತೀಯ ಕುಸ್ತಿಪಟು, ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು ಟೈಮ್ಸ್ ನಿಯತಕಾಲಿಕ ಪ್ರಕಟಿಸಿರುವ 2024ರ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪಟ್ಟಿಯಲ್ಲಿರುವ ಇತರ ಭಾರತೀಯರಲ್ಲಿ ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ, ಬಾಲಿವುಡ್ ನಟಿ ಆಲಿಯಾ ಭಟ್, ಇಂಡೊ–ಬ್ರಿಟನ್ ನಟ ದೇವ್ ಪಟೇಲ್ ಮತ್ತು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಸೇರಿದ್ದಾರೆ.

ಅಮೆರಿಕದ ಇಂಧನ ಇಲಾಖೆಯ ಸಾಲ ಕಾರ್ಯಕ್ರಮ ಕಚೇರಿಯ ನಿರ್ದೇಶಕ ಜಿಗರ್ ಶಾ, ಯೇಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರಿಯಂವದಾ ನಟರಾಜನ್, ಭಾರತೀಯ ಮೂಲದ ರೆಸ್ಟೋರೆಂಟ್ ಮಾಲೀಕರಾದ ಅಸ್ಮಾ ಖಾನ್ ಅವರ ಹೆಸರುಗಳು ಪ್ರಭಾವಿ 100ರ ಪಟ್ಟಿಯಲ್ಲಿವೆ.

ಸಾಕ್ಷಿ ಮಲಿಕ್ ಅವರು ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳದ ವಿರುದ್ಧ ನಿರಂತರ ಹೋರಾಟ ಮಾಡಿದ್ದರು. ಅವರಿಗೆ ಎರಡು ಬಾರಿ ವಿಶ್ವ ಚಾಂಪಿಯನ್ಶಿಪ್ನ ಕಂಚಿನ ಪದಕ ವಿಜೇತರಾದ ವಿನೇಶಾ ಪೋಗಟ್ ಮತ್ತು ಟೋಕಿಯೊ ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಸಾಥ್ ನೀಡಿದ್ದರು. ಅವರು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಅಧ್ಯಕ್ಷರಾಗಿದ್ದ ಬ್ರಿಜ್ಭೂಷಣ್ ಶರಣ್ ಸಿಂಗ್ ವಿರುದ್ಧ ಹೋರಾಟ ನಡೆಸಿ, ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಈ ಪ್ರತಿಭಟನೆಯು ಭಾರತ ಮತ್ತು ವಿದೇಶಗಳಲ್ಲಿ ಗಮನ ಸೆಳೆದಿತ್ತು.

ಸಿಂಗ್ ಹುದ್ದೆಯನ್ನು ತ್ಯಜಿಸಿದ ಸ್ವಲ್ಪ ಸಮಯದ ಬಳಿಕ ಅವರ ನಿಕಟವರ್ತಿ ಸಂಜಯ್ ಸಿಂಗ್ ಅವರು ಡಬ್ಲ್ಯುಎಫ್ಐ ಅಧ್ಯಕ್ಷರಾಗಿ ಆಯ್ಕೆಯಾದರು. ಅದರ ಬೆನ್ನಲ್ಲೇ ಸಾಕ್ಷಿ ಅವರು ನಿವೃತ್ತಿ ಪ್ರಕಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.