ಜೈಪುರ: ‘ಮುಸ್ಲಿಮರು ಭಯೋತ್ಪಾದನೆ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ ಮತ್ತು ಹಿಂದೂ ಮಹಿಳೆಯರನ್ನು ಅಪಹರಿಸುತ್ತಿದ್ದಾರೆ’ ಎಂದು ಯೋಗ ಗುರು ರಾಮದೇವ್ ಆರೋಪಿಸಿದ್ದಾರೆ.

ಬಾರ್ಮರ್ನಲ್ಲಿ ಗುರುವಾರ ನಡೆದ ಸಂತರ ಸಭೆಯಲ್ಲಿ ಅವರು ಹಿಂದೂ ಧರ್ಮದೊಂದಿಗೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳನ್ನು ಹೋಲಿಸಿ ಮಾತನಾಡಿದರು.

ಹಿಂದೂ ಧರ್ಮವು ತನ್ನ ಅನುಯಾಯಿಗಳಿಗೆ ಒಳ್ಳೆಯದನ್ನು ಮಾಡಲು ಕಲಿಸಿದರೆ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳು ಮತಾಂತರದ ಗೀಳನ್ನು ಹೊಂದಿವೆ ಎಂದು ಹೇಳಿದರು.

’ಮುಸ್ಲಿಮರು ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಾರೆ ಮತ್ತು ನಂತರ ಅವರು ಏನು ಬೇಕಾದರೂ ಮಾಡುತ್ತಾರೆ. ಅವರು ಹಿಂದೂ ಯುವತಿಯರನ್ನು ಅಪಹರಿಸಿ, ಎಲ್ಲಾ ರೀತಿಯ ಪಾಪ ಕೃತ್ಯಗಳನ್ನು ಮಾಡುತ್ತಾರೆ. ನಂತರ ಅವರಿಗೆ ನಮಾಜ್ ಸಲ್ಲಿಸುವುದನ್ನು ಕಲಿಸಲಾಗಿದೆ. ಹಿಂದೂ ಧರ್ಮದಲ್ಲಿ ಈ ರೀತಿ ಇಲ್ಲ’ ಎಂದು ಹೇಳಿದರು.

ಅವರ ಭಾಷಣದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ನಾನು ಯಾರನ್ನೂ ಟೀಕಿಸುತ್ತಿಲ್ಲ. ಕೆಲವರು ಇಡೀ ಜಗತ್ತನ್ನು ಇಸ್ಲಾಂಗೆ ಪರಿವರ್ತಿಸುವ ಬಗ್ಗೆ ಮಾತನಾಡುತ್ತಾರೆ ಮತ್ತು ಇತರರು ಜಗತ್ತನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಬಯಸುತ್ತಾರೆ. ಈ ನಂಬಿಕೆಗಳಿಗೆ ಬೇರೆ ಯಾವುದೇ ಕಾರ್ಯಸೂಚಿ ಇಲ್ಲ’ ಎಂದು ಅವರು ಪ್ರತಿಪಾದಿಸಿದರು.

ಹಿಂಸಾಚಾರ ಮತ್ತು ಅಪ್ರಾಮಾಣಿಕತೆಯಲ್ಲಿ ತೊಡಗದಂತೆ ಹಿಂದೂ ಧರ್ಮವು ಜನರಿಗೆ ಕಲಿಸುತ್ತದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.