ಲಖನೌ:ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ತವರು ಪಟ್ಟಣ ಗೋರಖ್ಪುರದ ಪ್ರಸಿದ್ಧ ಗೋರಖನಾಥ ದೇವಾಲಯದ ಪ್ರವೇಶ ದ್ವಾರದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಮೇಲೆ ಯುವಕನೊಬ್ಬ ಹರಿತವಾದ ಆಯುಧದಿಂದ ಭಾನುವಾರ ಸಂಜೆ ದಾಳಿ ಮಾಡಿದ್ದಾನೆ.

‘ಘಟನೆಯ ಹಿಂದೆ ಭಯೋತ್ಪಾದಕರ ಪಿತೂರಿ ಇರಬಹುದು. ಯಾವುದನ್ನೂ ತಳ್ಳಿಹಾಕುವಂತಿಲ್ಲ‘ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಸೋಮವಾರ ಹೇಳಿದ್ದಾರೆ.

‘ಘಟನೆಯ ಸಮಗ್ರ ತನಿಖೆ ನಡೆಸಲಾಗುವುದು. ರಾಜ್ಯ ಪೊಲೀಸ್ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತನಿಖೆ ನಡೆಸುತ್ತಿದೆ. ತನಿಖೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಸಹಾಯವನ್ನು ಪಡೆಯುವ ಸಾಧ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.

ಕೆಮಿಕಲ್ ಎಂಜಿನಿಯರ್ ಆಗಿರುವ ಗೋರಖ್ಪುರದ ನಿವಾಸಿ ಮುರ್ತಾಜಾ ಅಬ್ಬಾಸಿ ದಾಳಿ ನಡೆಸಿದ ಯುವಕ ಎಂದು ಗುರುತಿಸಲಾಗಿದೆ. ಅಬ್ಬಾಸಿಯನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.