ಅಮರಾವತಿ: ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಮುದ್ರಗಡ ಪದ್ಮನಾಭಂ ಅವರು ತಮ್ಮ ಹೆಸರನ್ನು 'ಪದ್ಮನಾಭ ರೆಡ್ಡಿ' ಎಂದು ಅಧಿಕೃತವಾಗಿ ಬದಲಿಸಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಹೇಳಿದ್ದಂತೆ, ಜನಸೇನಾ ನಾಯಕ ಪವನ್ ಕಲ್ಯಾಣ್ ಅವರನ್ನು ಸೋಲಿಸಲಾಗದ್ದಕ್ಕೆ ಹೆಸರು ಬದಲಿಸಿಕೊಂಡಿದ್ದಾರೆ.

ನಟ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್, ಪಿತಾಪುರಂ ವಿಧಾನಸಭೆ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ವಂಗಾ ಗೀತಾ ವಿಶ್ವನಾಥ್ ವಿರುದ್ಧ 70 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದರು.

'ಹೆಸರು ಬದಲಿಸಿಕೊಳ್ಳುವಂತೆ ಯಾರೂ ಮೇಲೆ ಒತ್ತಡ ಹೇರಿಲ್ಲ. ನಾನಾಗಿಯೇ ಹೆಸರು ಬದಲಿಸಿಕೊಂಡಿದ್ದೇನೆ' ಎಂದು ರೆಡ್ಡಿ ಮಾಧ್ಯಮದವರಿಗೆ ತಿಳಿಸಿದ್ದಾರೆ. ಆದಾಗ್ಯೂ, ಪವನ್ ಕಲ್ಯಾಣ್ ಅವರ ಅಭಿಮಾನಿಗಳು ತಮ್ಮನ್ನು ನಿಂದಿಸಿರುವುದಾಗಿ ಆರೋಪಿಸಿದ್ದಾರೆ.

'ನಿಮ್ಮ (ಪವನ್ ಕಲ್ಯಾಣ್) ಅಭಿಮಾನಿಗಳು ನಿರಂತರವಾಗಿ ನಿಂದನಾತ್ಮಕ ಸಂದೇಶಗಳನ್ನು ಕಳುಹಿಸಿದ್ದಾರೆ. ನನ್ನ ಪ್ರಕಾರ ಇದು ಸರಿಯಲ್ಲ. ಈ ರೀತಿ ತೆಗಳುವುದನ್ನು ಬಿಟ್ಟು ಒಂದು ಕೆಲಸ ಮಾಡಿ. ನಮನ್ನೆಲ್ಲ (ಕುಟುಂಬದ ಎಲ್ಲರನ್ನು) ಮುಗಿಸಿ ಬಿಡಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವು ತಿಂಗಳ ಹಿಂದಷ್ಟೇ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರಿರುವ ರೆಡ್ಡಿ, ಕಾಪು ಸಮುದಾಯದ ಪ್ರಬಲ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಕಾಪು ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸಿದ್ದ ಅವರು, ಎನ್.ಟಿ. ರಾಮರಾವ್ ಸರ್ಕಾರದಲ್ಲಿ ಸಚಿವರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.