ನವದೆಹಲಿ: ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಹಾಗೂ ಆತನ ಟ್ರಸ್ಟ್ಗಳ ಬ್ಯಾಂಕ್ ಖಾತೆಗೆ ಅಪರಿಚಿತ ‘ಹಿತೈಷಿಗಳಿಂದ’ ಸಂಶಯಾಸ್ಪದವಾಗಿ ಕೋಟಿಗಟ್ಟಲೆ ಹಣ ಸಂದಾಯವಾಗಿದೆ.

ತನ್ನ ಹಾಗೂ ತನ್ನ ಟ್ರಸ್ಟ್ನ ಬ್ಯಾಂಕ್ ಖಾತೆಗಳ ಮೂಲಕ ನಾಯ್ಕ್ ಈಚಿನ ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಸ್ವೀಕರಿಸಿದ್ದಾನೆ ಎಂದು ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆಯಿಂದ ತಿಳಿದುಬಂದಿದೆ.

‘ನಾಯ್ಕ್ ನಿಯಂತ್ರಣದಲ್ಲಿರುವ ಮುಂಬೈ ಮೂಲದ ಇಸ್ಲಾಮಿಕ್ ಸಂಶೋಧನಾ ಸಂಸ್ಥೆಯ (ಐಆರ್ಎಫ್) ವಿವಿಧ ಬ್ಯಾಂಕ್ ಖಾತೆಗಳಿಗೆ, ದೇಶವಷ್ಟೆ ಅಲ್ಲದೆ ಅರಬ್ ರಾಷ್ಟ್ರಗಳ ಒಕ್ಕೂಟ, ಸೌದಿ ಅರೇಬಿಯಾ, ಬಹರೇನ್, ಕುವೈತ್, ಒಮನ್, ಮಲೇಷ್ಯಾ ಸೇರಿದಂತೆ ವಿದೇಶಗಳಿಂದಲೂ ದೇಣಿಗೆ ಹಾಗೂಜಕಾತ್ (ದತ್ತಿ ಹಾಗೂ ಧಾರ್ಮಿಕ ಉದ್ದೇಶಕ್ಕಾಗಿ ಇಸ್ಲಾಂ ಕಾನೂನಿನಲ್ಲಿ ವಾರ್ಷಿಕವಾಗಿ ನೀಡುವ ಹಣ) ಸಂದಾಯವಾಗಿದೆ’ಎಂದು ಇ.ಡಿ ಹೇಳಿದೆ.

‘2003–04ರಿಂದ 2016–17ರವರೆಗೆ ಐಆರ್ಎಫ್ನ ಬ್ಯಾಂಕ್ ಖಾತೆಗಳಿಗೆ ₹64.8 ಕೋಟಿ ಹಣ ಜಮೆಯಾಗಿದೆ. ಇವುಗಳಲ್ಲಿ ಬಹುಪಾಲು ಹಣವನ್ನು ಶಾಂತಿ ಸಮಾವೇಶ ಆಯೋಜಿಸಲು ಬಳಸಲಾಗಿದೆ. ಇಂತಹ ಸಮಾವೇಶಗಳಲ್ಲಿಯೇ ನಾಯ್ಕ್, ಭಯೋತ್ಪಾದನೆ ಎಸಗುವಂತೆ ಮುಸ್ಲಿಂ ಯುವಕರಿಗೆ ಬೋಧಿಸುತ್ತಿದ್ದ ಹಾಗೂ ದ್ವೇಷ ಹರಡುವ ಭಾಷಣಗಳನ್ನು ಮಾಡುತ್ತಿದ್ದ’ ಎಂದು ಇ.ಡಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.