ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗುವ ಮೂಲಕ ವಿವಾದಕ್ಕೀಡಾಗಿರುವ ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್, ಕಲಾವಿದರ ಸಂಘದಿಂದಲೂ ಟೀಕೆಗೆ ಗುರಿಯಾಗಿದ್ದಾರೆ.

ಎಡ ಪ್ರಜಾಸತ್ತಾತ್ಮಕ ರಂಗದ ಅಭ್ಯರ್ಥಿ ಕೆ.ಬಿ. ಗಣೇಶ್ ಅವರ ಚುನಾವಣಾ ರ್್ಯಾಲಿಯಲ್ಲಿ ಮೋಹನ್ಲಾಲ್ ಶುಕ್ರವಾರ ಭಾಗವಹಿಸಿದ್ದರು.ರ್ಯಾಲಿಯಲ್ಲಿ ಭಾಗಿಯಾಗಿದ್ದರೂ, ಮೋಹನ್ಲಾಲ್ ಅವರು ಗಣೇಶ್ ಪರ ಮತ ಕೇಳಲಿಲ್ಲ. ಯಾವುದೇ ರಾಜಕೀಯ ಹೇಳಿಕೆಯನ್ನೂ ನೀಡಲಿಲ್ಲ. ಸ್ನೇಹಿತನಿಗಾಗಿ ಅವರು ವೇದಿಕೆ ಹತ್ತಿದ್ದರು.

ಮೋಹನ್ಲಾಲ್ ಅವರ ಈ ನಡೆಯನ್ನು ಖಂಡಿಸಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಲೀಂಕುಮಾರ್ ಅವರು ಮಲಯಾಳಂ ಸಿನಿಮಾ ಕಲಾವಿದರ ಸಂಘದ(ಅಮ್ಮ) ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದು ಕಲಾವಿದರ ಸಂಘದ ನಿಯಮಕ್ಕೆ ವಿರುದ್ಧವಾಗಿದ್ದು, ಈ ನಿಯಮವನ್ನು ಮೋಹನ್ಲಾಲ್ ಉಲ್ಲಂಘಿಸಿದ್ದಾರೆ ಎಂದು ಸಲೀಂ ಹೇಳಿದ್ದಾರೆ. ಸಲೀಂ ಅವರು ಕಾಂಗ್ರೆಸ್ ಪಕ್ಷವನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.