ನವದೆಹಲಿ (ಪಿಟಿಐ): 60ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಸೋಮವಾರ ಘೋಷಿಸಲಾಗಿದ್ದು, ಪಿ. ಶೇಷಾದ್ರಿ ಅವರ `ಭಾರತ್ ಸ್ಟೋರ್ಸ್' ಅತ್ಯುತ್ತಮ ಪ್ರಾದೇಶಿಕ ಕನ್ನಡ ಚಿತ್ರ ಮತ್ತು ಅದೇ ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ಎಚ್.ಜಿ. ದತ್ತಾತ್ರೇಯ ಅವರಿಗೆ ವಿಶೇಷ ಮನ್ನಣೆ ದೊರೆತಿದೆ.

ಮರಾಠಿ ಚಿತ್ರ `ಧಗ್'ನಲ್ಲಿನ ಅದ್ಭುತ ನಟನೆಗಾಗಿ ಉಷಾ ಜಾಧವ್ ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕ್ರೀಡಾ ಪಟುವೊಬ್ಬ ಡಕಾಯಿತನಾದ ನೈಜ ಕಥೆ ಆಧರಿಸಿದ ತಿಗ್‌ಮನ್ಶು ಧುಲಿಯಾ ಅವರ `ಪಾನ್ ಸಿಂಗ್ ತೋಮರ್' ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇದೇ ಚಿತ್ರದಲ್ಲಿನ ನಟನೆಗೆ ಇರ್ಫಾನ್ ಖಾನ್ ಹಾಗೂ `ಅನುಮತಿ' ಮರಾಠಿ ಚಿತ್ರದ ನಾಯಕ ವಿಕ್ರಮ್ ಗೋಖಲೆ ಅತ್ಯುತ್ತಮ ನಟ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಶಿವಾಜಿ ಲೋಟನ್ ಪಾಟೀಲ್ ಪಾಲಾಗಿದೆ.

ಪ್ರಮುಖ ವಿಭಾಗಗಳಲ್ಲಿ ಬಾಲಿವುಡ್ ಚಿತ್ರಗಳಿಗೆ ಸಮನಾಗಿ ಮಲಯಾಳಂ ಮತ್ತು ಮರಾಠಿ ಭಾಷೆಯ ಚಿತ್ರಗಳು ಪ್ರಶಸ್ತಿ ಬಾಚಿಕೊಂಡಿರುವುದು ಈ ಸಾಲಿನ ವಿಶೇಷ.

ಚಿತ್ತಗಾಂಗ್ ದಂಗೆ ಆಧರಿಸಿದ ವೇದವೃತ ಅವರ ನಿರ್ಮಾಣದ ಮೊದಲ ಹಿಂದಿ ಚಿತ್ರ `ಚಿತ್ತಗಾಂಗ್' ಮತ್ತು ಸಿದ್ಧಾರ್ಥ ಶಿವಾ ಅವರ ಮಲಯಾಳಂ ಚಿತ್ರ `101 ಚೋದ್ಯಂಗಳ್ (101 ಪ್ರಶ್ನೆಗಳು)' ಇಂದಿರಾ ಗಾಂಧಿ ಪ್ರಶಸ್ತಿ ಬಾಚಿಕೊಂಡಿವೆ.

ಪೂರ್ಣ ಪ್ರಮಾಣದ ಮನರಂಜನೆ ಒದಗಿಸಿದ ಗೌರವಕ್ಕೆ ಪಾತ್ರವಾಗಿರುವ, ವೀರ್ಯಾಣು ದಾನಕ್ಕೆ ಸಂಬಂಧಿಸಿದ ನಟ ಜಾನ್ ಅಬ್ರಹಾಂ ನಿರ್ಮಿಸಿರುವ ಹಿಂದಿ ಚಿತ್ರ `ವಿಕ್ಕಿ ಡೋನರ್' ಮತ್ತು ನಿರ್ದೇಶಕ ಅನ್ವರ್ ರಶೀದ್ ಅವರ ಮಲಯಾಳಂ ಚಿತ್ರ `ಉಸ್ತಾದ್ ಹೋಟೆಲ್' ಜನಪ್ರಿಯ ಚಿತ್ರ ಪ್ರಶಸ್ತಿಗೆ ಪಾತ್ರವಾಗಿವೆ.

ವಿದ್ಯಾ ಬಾಲನ್ ನಟನೆಯ `ಕಹಾನಿ' ಹಿಂದಿ ಚಿತ್ರದ ರೋಮಾಂಚಕ ಕಥಾವಸ್ತು ಬರೆದ ನಿರ್ದೇಶಕ ಸುಜೋಯ್ ಘೋಷ್ ಅವರು ಮೂಲ ಕಥೆ ಬರಹಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, ಭಾವೇಶ್ ಮಂಡಾಲಿಯಾ ಮತ್ತು ಉಮೇಶ್ ಶುಕ್ಲಾ ಅವರ `ಓ ಮೈ ಗಾಡ್' ಹಿಂದಿ ಚಿತ್ರ, ಅತ್ಯುತ್ತಮ ರೂಪಾಂತರಿಸಿದ ಚಿತ್ರಕಥೆ ಪ್ರಶಸ್ತಿಗೆ ಭಾಜನವಾಗಿದೆ. `ಕಹಾನಿ' ಚಿತ್ರ ಸಂಕಲನಕ್ಕೆ ನಮ್ರತಾ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.