ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 2,511 ನ್ಯಾಯಾಂಗ ನಿಂದನೆ ಪ್ರಕರಣಗಳು ಹೈಕೋರ್ಟ್ ಮತ್ತು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ (ಕೆಎಟಿ) ಬಾಕಿ ಇವೆ.

ಬಾಕಿ ಇರುವ ನ್ಯಾಯಾಂಗ ನಿಂದನಾ ಪ್ರಕರಣಗಳ ಪಟ್ಟಿ ಸಹಿತ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಡಿ. 11ರಂದು ಪತ್ರ ಬರೆದಿರುವ ಅಡ್ವೊಕೇಟ್ ಜನರಲ್ (ಎಜಿ) ಕೆ. ಶಶಿ ಕಿರಣ್ ಶೆಟ್ಟಿ, ‘ಹಲವು ಬಾರಿ ಪತ್ರಗಳು, ಸಿಸಿಎಂಎಸ್ (ಕೋರ್ಟ್ ಕೇಸ್ ಮಾನಿಟರಿಂಗ್ ಸಿಸ್ಟಂ) ಮುಖಾಂತರ ಮಾಹಿತಿ ಒದಗಿಸಿದ್ದರೂ ಸಂಬಂಧಿಸಿದ ಅಧಿಕಾರಿಗಳು, ಪ್ರತಿವಾದಿಗಳು ಪ್ರತಿಕ್ರಿಯಿಸಿಲ್ಲ. ಅಲ್ಲದೆ, ನಿಗದಿತ ಅವಧಿಯ ಒಳಗೆ ಪ್ರಮಾಣಪತ್ರ, ಪ್ರತಿ ಪ್ರಮಾಣಪತ್ರ ಸಲ್ಲಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಜಿ ಅವರ ಪತ್ರದ ಸಹಿತ ಎಲ್ಲ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳಿಗೆ ಡಿ. 27ರಂದು ಪತ್ರ ಬರೆದಿರುವ ಸಿಎಸ್, ‘ಹೈಕೋರ್ಟ್ ಮತ್ತು ಕೆಎಟಿಯಲ್ಲಿ ಬಾಕಿ ಇರುವ ನ್ಯಾಯಾಂಗ ನಿಂದನಾ ಪ್ರಕರಣಗಳ ಕುರಿತು ಅವಶ್ಯಕ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಎರಡೂ ಪತ್ರಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ನಿರ್ಣಯ ತೆಗೆದುಕೊಳ್ಳದೆ ವಿಳಂಬ: ‘ಹೈಕೋರ್ಟ್ ಪ್ರಕರಣಗಳ ನಿರ್ವಹಣೆಯಲ್ಲಿ ಇಲಾಖೆಗಳು ವಿಳಂಬ ಮಾಡುತ್ತಿರುವುದರಿಂದ, ಮುಖ್ಯ ಕಾರ್ಯದರ್ಶಿಯೇ ಪ್ರಮಾಣಪತ್ರ ಸಲ್ಲಿಸುವಂತೆ ನ್ಯಾಯಾಲಯಗಳು ಸೂಚಿಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ನ್ಯಾಯಾಲಯಗಳು ನೀಡುವ ಆದೇಶಗಳ ಕುರಿತಂತೆ ಸಕಾಲದಲ್ಲಿ ನಿಯಮಾನುಸಾರ ಪರಿಶೀಲಿಸಿ, ಮೇಲ್ಮನವಿ ಸಲ್ಲಿಸುವ ಅಧಿಕಾರವನ್ನು ಆಡಳಿತ ಇಲಾಖೆಗಳಿಗೆ ನೀಡಲಾಗಿದೆ. ಆದರೆ, ಇಲಾಖೆಗಳು ಯಾವುದೇ ನಿರ್ಣಯವನ್ನು ಸಕಾಲದಲ್ಲಿ ತೆಗೆದುಕೊಳ್ಳದೆ ವಿಳಂಬ ಮಾಡುತ್ತಿರುವುದು ಕಂಡುಬಂದಿದೆ’ ಎಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಪತ್ರದಲ್ಲಿ ಸಿಎಸ್ ತಿಳಿಸಿದ್ದಾರೆ.

‘ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ನ್ಯಾಯಾಂಗ ನಿಂದನಾ ಪ್ರಕರಣಗಳ ಪಟ್ಟಿಯನ್ನು ಎಜಿ ಕಚೇರಿಯಿಂದ ಖುದ್ದು ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಬೇಕು. ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳ, ನ್ಯಾಯಾಂಗ ನಿಂದನಾ ಪ್ರಕರಣಗಳ ಬಗ್ಗೆ ಪ್ರತಿ ತಿಂಗಳು ಸಮೀಕ್ಷಾ ಸಭೆ ನಡೆಸಬೇಕು. ಸರ್ಕಾರದ ಪರವಾಗಿ ಸಮರ್ಥವಾಗಿ ವಾದ ಮಾಡಲು ಅನುಕೂಲ ಆಗುವಂತೆ ಸರ್ಕಾರಿ ವಕೀಲರನ್ನು ನೇಮಿಸಬೇಕು. ಪ್ರತಿಯೊಂದಕ್ಕೂ ಷರಾ ಬರೆದು, ಆಕ್ಷೇಪಣಾ ಹೇಳಿಕೆಗಳನ್ನು ದಾಖಲಿಸಬೇಕು’ ಎಂದೂ ಸೂಚನೆ ನೀಡಿದ್ದಾರೆ.

ಅಲ್ಲದೆ, ಸುಪ್ರೀಂಕೋರ್ಟ್‌ನಲ್ಲಿ ಕೂಡಾ ಎಸ್‌ಎಲ್‌ಪಿ ಹಾಗೂ ಮೇಲ್ಮನವಿಗಳನ್ನು ಸಕಾಲದಲ್ಲಿ ಸಲ್ಲಿಸಲು ಅಗತ್ಯ ಕ್ರಮ ವಹಿಸಲು ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದೂ ತಿಳಿಸಿದ್ದಾರೆ.

ಎಜಿ ಪತ್ರದಲ್ಲಿ ಏನಿದೆ?:

ಹೈಕೋರ್ಟ್ ಮತ್ತು ಕೆಎಟಿಯ ಪೀಠಗಳಲ್ಲಿ ಯಾವ ವರ್ಷ, ಎಷ್ಟು ನ್ಯಾಯಾಂಗ ನಿಂದನಾ ಪ್ರಕರಣಗಳು ಬಾಕಿ ಇವೆ ಎಂಬ ಪಟ್ಟಿಯನ್ನು ಮುಖ್ಯ ಕಾರ್ಯದರ್ಶಿಯವರಿಗೆ ನೀಡಿರುವ ಎಜಿ, ‘ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಇದೇ ಆಗಸ್ಟ್‌ವರೆಗೆ ನ್ಯಾಯಾಂಗ ನಿಂದನಾ ಪ್ರಕರಣಗಳ ಪ್ರತಿಯನ್ನು ಸಂಬಂಧಿಸಿದ ಇಲಾಖೆಗಳಿಗೆ ಮತ್ತು ಪ್ರತಿವಾದಿಗಳಿಗೆ ಇ– ಮೇಲ್ ಮಾಡಲಾಗುತ್ತಿತ್ತು. ಅಲ್ಲದೆ, ಪ್ರತಿವಾದಿಗಳಿಗೆ ಕರೆ ಮಾಡಿ ಪ್ರಕರಣಗಳಿಗೆ ಸಂಬಂಧಿಸಿದ ವಿವರಗಳನ್ನು ನೀಡಲಾಗುತ್ತಿತ್ತು. ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಕೂಡಾ ಕಳುಹಿಸಲಾಗುತ್ತಿತ್ತು. ಇದೇ ನವೆಂಬರ್‌ನಿಂದ ಸಿಸಿಎಂಎಸ್ ಮೂಲಕ ಆಯಾ ಇಲಾಖೆಗಳಿಗೆ ಪ್ರಕರಣಗಳ ಮಾಹಿತಿ ನೀಡಲಾಗುತ್ತಿದೆ. ಈ ಎಲ್ಲ ಪ್ರಯತ್ನಗಳನ್ನು ಮಾಡಿದರೂ ಅಧಿಕಾರಿಗಳು, ಪ್ರತಿವಾದಿಗಳು ಸ್ಪಂದಿಸುತ್ತಿಲ್ಲ. ನ್ಯಾಯಾಲಯಗಳಿಗೆ ಸಲ್ಲಿಸಲು ಅನುಪಾಲನಾ ಪ್ರಮಾಣಪತ್ರವನ್ನೂ ಒದಗಿಸುತ್ತಿಲ್ಲ. ಬಹುತೇಕ ಪ್ರಕರಣಗಳಲ್ಲಿ ಪ್ರತಿವಾದಿಗಳು ಪ್ರಕರಣದ ವಿಚಾರಣೆ ದಿನ ಅಥವಾ ಹಿಂದಿನ ದಿನ ಎಜಿ ಕಚೇರಿಯನ್ನು ಸಂಪರ್ಕಿಸುತ್ತಾರೆ. ಈ ರೀತಿ ಮಾಡುವುದರಿಂದ ಹಲವು ವರ್ಷ, ತಿಂಗಳುಗಳಿಂದ ಬಾಕಿ ಇರುವ ಪ್ರಕರಣಗಳಲ್ಲಿ ನ್ಯಾಯಾಲಯಗಳಲ್ಲಿ ಸಮರ್ಪಕವಾಗಿ ಪ್ರತಿಪಾದಿಸುವುದು ದೊಡ್ಡ ಸವಾಲಾಗುತ್ತದೆ’ ಎಂದು ಪತ್ರದಲ್ಲಿ ಎಜಿ ಉಲ್ಲೇಖಿಸಿದ್ದಾರೆ.

‘ನ್ಯಾಯಾಂಗ ನಿಂದನಾ ಪ್ರಕರಣಗಳಲ್ಲಿ ಪ್ರತಿ ಪ್ರಮಾಣಪತ್ರ ಸಲ್ಲಿಸುವುದೊಂದೇ ನಮ್ಮ ಮುಂದಿರುವ ಆಯ್ಕೆ ಎನ್ನುವುದು ಮುಖ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ದಂಡ ವಿಧಿಸುವ ಜೊತೆಗೆ ಕೌಂಟರ್ ಅಫಿಡವಿಟ್ ಸಲ್ಲಿಸಲು ವಿಳಂಬ ಆಗಿರುವುದಕ್ಕೆ ಅಥವಾ ತನ್ನ ಆದೇಶ ಪಾಲಿಸದೇ ಇರುವುದಕ್ಕೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಅದರಲ್ಲೂ ಇಲಾಖೆಗಳ ಮುಖ್ಯಸ್ಥರಿಗೆ ಹೈಕೋರ್ಟ್, ಕೆಎಟಿ ನಿರ್ದೇಶನ ನೀಡುತ್ತಿವೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದೂ ಪತ್ರದಲ್ಲಿ ಅವರು ಮನವಿ ಮಾಡಿದ್ದಾರೆ.

ಸಿಎಸ್ ಪ್ರತಿವಾದಿ

ರಾಜ್ಯ ಹೈಕೋರ್ಟ್, ಮುಖ್ಯ ಕಾರ್ಯದರ್ಶಿಯನ್ನು ಪ್ರತಿವಾದಿ ಯಾಗಿ ಮಾಡಿರುವ 49 ನ್ಯಾಯಾಂಗ ನಿಂದನಾ ಪ್ರಕರಣಗಳು ಬಾಕಿ ಇವೆ. ಅವುಗಳಲ್ಲಿ ಕೌಂಟರ್ ಅಫಿಡವಿಟ್ ಸಲ್ಲಿಸಿಲ್ಲ. ಈ ಪೈಕಿ 2021ರಲ್ಲಿ 1, 2022ರಲ್ಲಿ 12, 2023ರಲ್ಲಿ 36 ಪ್ರಕರಣಗಳಿವೆ. ಇನ್ನು ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ 6, ಕಲಬುರಗಿ ಪೀಠದಲ್ಲಿ 2 ಪ್ರಕರಣಗಳಲ್ಲಿ ಮುಖ್ಯ ಕಾರ್ಯದರ್ಶಿಯವರೇ ಪ್ರತಿವಾದಿಯಾಗಿರುವ ನ್ಯಾಯಾಂಗ ನಿಂದನಾ ಪ್ರಕರಣಗಳು ಬಾಕಿ ಇವೆ ಎಂದು ಪತ್ರದಲ್ಲಿ ಎಜಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.