ಬೆಂಗಳೂರು: ಮೈಸೂರು, ಹುಬ್ಬಳ್ಳಿ, ಹಾಸನಗಳಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 100ರಂತೆ ಒಟ್ಟು 300 ಹೆಚ್ಚುವರಿ ಸೀಟುಗಳಿಗೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಅನುಮತಿ ನೀಡುವ ಸಾಧ್ಯತೆಯಿದೆ.

‘ಈ ಕಾಲೇಜುಗಳನ್ನು ಬಹಳ ಹಿಂದೆಯೇ ಸ್ಥಾಪಿಸಲಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಈಗಿರುವ 150 ಸೀಟುಗಳ ಜತೆಗೆ ಹೆಚ್ಚುವರಿಯಾಗಿ 100 ಸೀಟುಗಳನ್ನು ಒದಗಿಸಬೇಕು ಎಂಬ ಬೇಡಿಕೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಮುಂದಿಟ್ಟಿತ್ತು. ಅದರಂತೆ ಎಂಸಿಐನ ಆಡಳಿತ ಮಂಡಳಿ ರಚಿಸಿದ ಸಮಿತಿ ಇದೀಗ ಪರಿಶೀಲನೆ ನಡೆಸುತ್ತಿದೆ. ಈ ತಿಂಗಳ ಅಂತ್ಯ ಅಥವಾ ಜೂನ್ ಮೊದಲ ವಾರದೊಳಗೆ ಸ್ಪಷ್ಟ ಚಿತ್ರಣ ಸಿಗಬಹುದು’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ (ಬಿಎಂಸಿ) 250 ಸೀಟುಗಳಿವೆ. ಉಳಿದ ಮೂರು ಕಾಲೇಜುಗಳಿಗಷ್ಟೇ ನಾವು ಬೇಡಿಕೆ ಸಲ್ಲಿಸಿದ್ದೇವೆ. ಕೆಲವು ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳನ್ನು ಹೆಚ್ಚಿಸಲು ಎಂಸಿಐ ಈಚೆಗೆ ನಿರ್ಧಾರ ಕೈಗೊಂಡಿದೆ’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಪಿ.ಜಿ. ಗಿರೀಶ್ ಹೇಳಿದರು.

‘ರಾಜ್ಯದಲ್ಲಿ 18 ಸರ್ಕಾರಿ ವೈದ್ಯಕೀಯ ಕಾಲೇಜುಗಳಿದ್ದು, ಕೆಲವು ಹೊಸ ಕಾಲೇಜುಗಳಲ್ಲಿ ಕೆಲವು ಮಾನದಂಡಗಳನ್ನು ಪೂರ್ಣಗೊಳಿಸುವುದು ಬಾಕಿ ಇದೆ. ಆ ಕಾಲೇಜುಗಳಲ್ಲಿ ಸೀಟು ಹೆಚ್ಚಿಸಲು ಬೇಡಿಕೆ ಸಲ್ಲಿಸಿಲ್ಲ’ ಎಂದರು.

ಬೌರಿಂಗ್ಗೆ 150 ಸೀಟು: ನಗರದ ಬೌರಿಂಗ್ ಮತ್ತು ಕರ್ಜನ್ ಆಸ್ಪತ್ರೆಗಳ ಆವರಣದಲ್ಲಿ 138 ಎಕರೆ ಪ್ರದೇಶದಲ್ಲಿ ₹ 197 ಕೋಟಿ ವೆಚ್ಚದಲ್ಲಿ 2019–20ನೇ ಸಾಲಿನಿಂದ ಹೊಸ ವೈದ್ಯಕೀಯ ಕಾಲೇಜು ಕಾರ್ಯಾರಂಭಮಾಡಲಿದೆ. ಇಲ್ಲಿ 150 ಸೀಟುಗಳು ಲಭ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.