ಬೆಂಗಳೂರು: ಜಾಗತಿಕ ವೈಮಾನಿಕ ಉದ್ಯಮ ವಲಯದ ಅತಿ ದೊಡ್ಡ ಪ್ರದರ್ಶನ ‘ಏರೋ ಇಂಡಿಯಾ–2023’ ಸೋಮವಾರ ಆರಂಭವಾಗಲಿದ್ದು, ಭಾರತದ ರಕ್ಷಣಾ ಕ್ಷೇತ್ರದ ಸಾಮರ್ಥ್ಯಕ್ಕೂ ಸಾಕ್ಷಿಯಾಗಲಿದೆ.

ಒಟ್ಟು 98 ದೇಶಗಳ 811 ಪ್ರದರ್ಶಕರು ಭಾಗವಹಿಸಲಿದ್ದಾರೆ. ₹75 ಸಾವಿರ ಕೋಟಿ ವಹಿವಾಟಿನ 251 ರಕ್ಷಣಾ ಉಪಕರಣಗಳು, ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ವಿವಿಧ ಕಂಪನಿಗಳು ಸಹಿ ಹಾಕುವ ನಿರೀಕ್ಷೆ ಇದೆ.

ಫೆ.13ರಿಂದ 17ರವರೆಗೆ ಯಲಹಂಕ ವಾಯುನೆಲೆಯ ಒಟ್ಟು 35 ಸಾವಿರ ಚದರ ಮೀಟರ್ ಪ್ರದೇಶದಲ್ಲಿ ನಡೆಯಲಿರುವ ‘ಏರೋ ಇಂಡಿಯಾ–2023’ ಅನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಿಗ್ಗೆ 9.30ಕ್ಕೆ ಉದ್ಘಾಟಿಸಲಿದ್ದಾರೆ.

1996ರಲ್ಲಿ ಆರಂಭವಾದ ವೈಮಾನಿಕ ಕ್ಷೇತ್ರದ ಶಕ್ತಿ ಪ್ರದರ್ಶನವು ದ್ವೈವಾರ್ಷಿಕವಾಗಿ ನಡೆಯುತ್ತಿದ್ದು, ಇದು 14ನೇ ಆವೃತ್ತಿ. ಏಷ್ಯಾದಲ್ಲೇ ಅತಿ ದೊಡ್ಡ ರಕ್ಷಣಾ ಮತ್ತು ವೈಮಾನಿಕ ಪ್ರದರ್ಶನ ಇದಾಗಿದ್ದು, ದೇಶದ ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಗಳು, ರಕ್ಷಣಾ ಉಪಕರಣಗಳು ಮತ್ತು ವೈಮಾನಿಕ ಕ್ಷೇತ್ರದ ಸಾಧನೆಗಳನ್ನು ಬಿಂಬಿಸಲಿದೆ. ವೈಮಾನಿಕ ಕ್ಷೇತ್ರದ ಉದ್ಯಮದ ಸಾಮರ್ಥ್ಯ
ಗಳು, ಉತ್ಪನ್ನಗಳು ಮತ್ತು ಸೇವೆಗಳ ಪ್ರದರ್ಶನಕ್ಕೆ ಇದು ಅತಿ ದೊಡ್ಡ ವೇದಿಕೆಯಾಗಿದೆ.

32 ದೇಶಗಳ ರಕ್ಷಣಾ ಸಚಿವರು, ಜಾಗತಿಕ ಮತ್ತು ಭಾರತದ 73 ಪ್ರಮುಖ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾ
ಧಿಕಾರಿಗಳು (ಸಿಇಒ) ಭಾಗವಹಿಸಲಿದ್ದು, ಮಹತ್ವದ ಚರ್ಚೆಗಳು ಮತ್ತು ಒಪ್ಪಂದಗಳು ನಡೆಯುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.