ಬಳ್ಳಾರಿ: ‘ಭೂಮಿ ಮಾರಾಟ ಕುರಿತುಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಈಗಾಗಲೇ ಚರ್ಚಿಸಿರುವೆ. ಈಗಲೂ ಭೂಮಿ ಮಾರಾಟ ನಿರ್ಧಾರವನ್ನು ವಾಪಸ್ ಪಡೆಯುವಂತೆ ಅವರಿಗೆ ಮನವಿ ಮಾಡುವೆ’ ಎಂದು ಸಚಿವ ಆನಂದ್‌ಸಿಂಗ್ ಹೇಳಿದರು.

‘ಜಿಂದಾಲ್ ವಿಷಯದಲ್ಲಿ ಕಾಂಗ್ರೆಸ್ ಪ್ರಚೋದನಕಾರಿ ಸವಾಲನ್ನು ಒಡ್ಡುತ್ತಿದೆ. ಅಂದು ವಿರೋಧಿಸಿದ್ದಂತೆಯೇ ಇಂದೂ ಭೂಮಿ ಮಾರಾಟವನ್ನು ವಿರೋಧಿಸುವೆ. ಭೂಮಿಯನ್ನು ಗುತ್ತಿಗೆಗಷ್ಟೇ ನೀಡಬೇಕು ಎಂಬ ಪ್ರತಿಪಾದನೆಗೆ ಈಗಲೂ ಬದ್ಧ’ ಎಂದು ಶನಿವಾರ ಹೇಳಿದರು.

‘ಭೂಮಿ ಮಾರಾಟದ ಪ್ರಸ್ತಾವವನ್ನು ಜಿಂದಾಲ್ ಸಲ್ಲಿಸಿದಾಗ ರಾಜ್ಯ ಸರ್ಕಾರ ತಾಂತ್ರಿಕ ಸಮಸ್ಯೆಗಳನ್ನು ಪರಿಶೀಲಿಸಬೇಕಾಗಿತ್ತು. ಆದರೆ ಮನುಷ್ಯ ಸಹಜವಾಗಿ ಈಗಾಗಲೇ ತಪ್ಪಾಗಿದೆ. ಭೂಮಿ ಮಾರಾಟ ಮಾಡುವ ಬದಲು, ಕಾರ್ಖಾನೆ ಕಾರ್ಯನಿರ್ವಹಿಸುವವರೆಗೂ ಭೂಮಿಯನ್ನು ವಾಪಸ್ ಪಡೆಯುವುದಿಲ್ಲ ಎಂಬ ಒಪ್ಪಂದ ಏರ್ಪಡಿಸಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.