ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದ ಗೇಟಿನ ಬೀಗವನ್ನು ಭಾನುವಾರ ಕಲ್ಲಿನಿಂದ ಜಜ್ಜಿ ಒಡೆಯಲು ಯತ್ನಿಸಿದ್ದ ರೈತ ಮುಖಂಡ ಅಶೋಕ ಯಮಕನಮರಡಿ ಅವರನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ‘ಗೂಂಡಾ’ ಎಂದು ಜರಿದಿದ್ದರು. ಆದರೆ, ಅವರು ಅದೇ ಮುಖಂಡನೊಂದಿಗೆ ಇರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಖಾನಾಪುರ ತಾಲ್ಲೂಕು ಗಂದಿಗವಾಡ ಗ್ರಾಮದ ಅಶೋಕ ಯಮಕನಮರಡಿ, ರೈತ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ವಿವಿಧ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಚೆಗೆ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಆಯೋಜಿಸಿದ್ದ ಜನತಾದರ್ಶನ ವೇಳೆ, ರೈತರು ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅವರಿಂದ, ಮುಖ್ಯಮಂತ್ರಿ ಮನವಿಯನ್ನೂ ಸ್ವೀಕರಿಸಿದ್ದರು.

ಇದಲ್ಲದೇ, 2 ವರ್ಷಗಳ ಹಿಂದೆ ಅವರ ಮನೆಯಲ್ಲಿ ಕುಮಾರಸ್ವಾಮಿ ಉಪಾಹಾರ ಸೇವಿಸಿದ್ದರು ಎನ್ನಲಾದ ಪೋಟೊಗಳನ್ನೂ ಹಾಕಲಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.