ಬಂಡೀಪುರ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಮರಿಗಳು ಹೆಚ್ಚಿರುವುದು ಹೆಮ್ಮೆಯ ವಿಚಾರ. ಅವುಗಳ ಸಂರಕ್ಷಣೆ ಜವಾಬ್ದಾರಿ ಎಲ್ಲರ ಮೇಲಿದೆ
ಡಾ.ಪಿ.ರಮೇಶ್‌ಕುಮಾರ್ ಬಂಡೀಪುರ ಹುಲಿ ಯೋಜನೆ ನಿರ್ದೇಶಕ
ಬಿಆರ್‌ಟಿಯಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗಿರುವುದು ಅಚ್ಚರಿ ತಂದಿದೆ. ಇದಕ್ಕೆ ಏನು ಕಾರಣ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚಬೇಕಿದೆ
ಮಲ್ಲೇಶಪ್ಪ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ
ಬಿಆರ್‌ಟಿಯಲ್ಲಿ ಕಳೆದ ಬಾರಿ 40ರಿಂದ 50ರಷ್ಟು ಹುಲಿಗಳಿವೆ ಎಂದು ಹೇಳಲಾಗಿತ್ತು. ಈ ಬಾರಿ 39 ಹುಲಿಗಳ ಎರಡು ಮರಿಗಳಿವೆ ಎಂದು ವರದಿ ಹೇಳಿದೆ.
ದೀಪ್ ಜೆ.ಕಾಂಟ್ರ್ಯಾಕ್ಟರ್ ಬಿಆರ್‌ಟಿ ಡಿಸಿಎಫ್
ಬಂಡೀಪುರ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಮರಿಗಳು ಹೆಚ್ಚಿರುವುದು ಹೆಮ್ಮೆಯ ವಿಚಾರ. ಅವುಗಳ ಸಂರಕ್ಷಣೆ ಜವಾಬ್ದಾರಿ ಎಲ್ಲರ ಮೇಲಿದೆ
ಡಾ.ಪಿ.ರಮೇಶ್‌ಕುಮಾರ್ ಬಂಡೀಪುರ ಹುಲಿ ಯೋಜನೆ ನಿರ್ದೇಶಕ
ಬಿಆರ್‌ಟಿ
ಇಳಿದ ಹುಲಿಗಳ ಸಂಖ್ಯೆ ಜಿಲ್ಲೆಯ ಮತ್ತೊಂದು ಹುಲಿ ಸಂರಕ್ಷಿತ ಪ್ರದೇಶ ಬಿಆರ್‌ಟಿಯಲ್ಲಿ ಹುಲಿಗಳ ಸಂಖ್ಯೆ ಇಳಿದಿರುವುದು ಅಧಿಕಾರಿಗಳು ಪರಿಸರವಾದಿಗಳ ಅಚ್ಚರಿಗೆ ಕಾರಣವಾಗಿದೆ. ಕಳೆದ ಬಾರಿಯ ಗಣತಿಯಲ್ಲಿ 49 ಹುಲಿಗಳಿವೆ ಎಂದು ಹೇಳಲಾಗಿತ್ತು. 2022ರ ವರದಿ 39 ಹುಲಿಗಳಿವೆ ಎಂದು ಹೇಳಿದೆ. ಎರಡು ಮರಿಗಳಿವುದೂ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಗೊತ್ತಾಗಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರಬೇಕೇ ವಿನಾ ಕಡಿಮೆಯಾಗುವುದಕ್ಕೆ ಸಾಧ್ಯವೇ ಇಲ್ಲ. ಏನಾಗಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ಹೇಳುತ್ತಾರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ‘ಕಳೆದ ವರ್ಷ ಜುಲೈ ಆಗಸ್ಟ್ ಸಮಯದಲ್ಲಿ ಹುಲಿ ಸಮೀಕ್ಷೆ ಮಾಡಲಾಗಿತ್ತು. ಇದು ಮಳೆಗಾಲವಾಗಿರುವುದರಿಂದ ಅರಣ್ಯದಲ್ಲಿ ಹುಲಿಗಳ ಓಡಾಟ ಕಡಿಮೆ ಇರುತ್ತದೆ. ಕ್ಯಾಮೆರಾ ಟ್ರ್ಯಾಪ್‌ಗೆ ಎಲ್ಲ ಹುಲಿಗಳು ಬೀಳುವ ಸಾಧ್ಯತೆ ಕಡಿಮೆ. ಇದು ಕೂಡ ಕಾರಣ ಆಗಿರಬಹುದು’ ಎಂದು ಬಿಆರ್‌ಟಿ ಡಿಸಿಎಫ್ ದೀಪ್ ಜೆ.ಕಾಂಟ್ರ್ಯಾಕ್ಟರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳಿವೆ
ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾಗಲು ತುದಿಗಾಲಲ್ಲಿ ನಿಂತಿರುವ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳಿವೆ ಎಂದು ವರದಿ ಹೇಳಿದೆ. 18ರಿಂದ 20 ಹುಲಿಗಳಿವೆ ಎಂದು ಈ ಹಿಂದೆ ಹೇಳಲಾಗಿತ್ತು. ಇಲ್ಲೂ ಜುಲೈ ಆಗಸ್ಟ್‌ನಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಕ್ಯಾಮೆರಾ ಟ್ರ್ಯಾಪ್‌ಗಳ ಕೊರತೆಯೂ ಕಂಡು ಬಂದಿತ್ತು ಎಂದು ಹೇಳುತ್ತಾರೆ ಅಧಿಕಾರಿಗಳು. ಪಕ್ಕದ ಕಾವೇರಿ ವನ್ಯಧಾಮದಲ್ಲಿ ಎರಡು ಹುಲಿಗಳಿವೆ ಎಂಬುದನ್ನು ವರದಿ ಉಲ್ಲೇಖಿಸಿದೆ. ಕಳೆದ ಬಾರಿಯ ಗಣತಿಯಲ್ಲಿ ಒಂದು ಹುಲಿ ಇರುವುದು ಪತ್ತೆಯಾಗಿತ್ತು.