ಬೆಳಗಾವಿ: ‘ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಈ ಬಾರಿಯ ವಿಧಾನಮಂಡಲ ಚಳಿಗಾಲದ ಅಧಿವೇಶನ ಮಾದರಿಯಾಗಲಿದೆ. ಉತ್ತರ ಕರ್ನಾಟಕದ ಜನರಿಗೆ ಸಮಾಧಾನ, ಸಂತೃಪ್ತಿ ತರುವ ಭರವಸೆ ಇದೆ’ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ವಿಧಾನಮಂಡಲ ಚಳಿಗಾಲದ ಅಧಿವೇಶನ ಸಂಬಂಧ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಕೈಗೊಂಡ ಸಿದ್ಧತೆಯನ್ನು ಮಂಗಳವಾರ ಪರಿಶೀಲಿಸಿದ ನಂತರ ಅವರು, ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಡಿಸೆಂಬರ್ 4ರಿಂದ 15ರವರೆಗೆ ಅಧಿವೇಶನ ನಡೆಯುವ ಸಾಧ್ಯತೆ ಇದೆ. ದಿನಾಂಕ ಇನ್ನೂ ಅಂತಿಮವಾಗಿಲ್ಲ. ಮುಖ್ಯಮಂತ್ರಿ ಅವರು ಅಧಿಕೃತವಾಗಿ ಇದನ್ನು ಘೋಷಿಸುತ್ತಾರೆ. ಆದರೆ, ಅಧಿವೇಶನಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ವಿವಿಧ ಸಮಿತಿ ರಚಿಸುವಂತೆ ಸೂಚಿಸಿದ್ದೇವೆ. ಅಧಿವೇಶನಕ್ಕೆ ಬರುವ ಸಚಿವರು, ಶಾಸಕರು, ಅಧಿಕಾರಿಗಳು, ಮಾಧ್ಯಮದವರು ಮತ್ತು ವೀಕ್ಷಣೆಗೆ ಬರುವ ಜನರಿಗೆ ಎಲ್ಲ ರೀತಿಯ ಸೌಕರ್ಯ ಕಲ್ಪಿಸಲಾಗುವುದು’ ಎಂದು ಹೇಳಿದರು.

‘ಸುವರ್ಣ ಸೌಧದ ಉತ್ತಮ ನಿರ್ವಹಣೆಗೆ ಶಾಶ್ವತ ಯೋಜನೆ ರೂಪಿಸಲಾಗುವುದು. ಸೌಧವನ್ನು ಬಾಡಿಗೆ ಕೊಡುವ ವಿಚಾರವಿಲ್ಲ. ಆದರೆ, ರಾಷ್ಟ್ರಮಟ್ಟದ ಸಮ್ಮೇಳನ, ಕಾರ್ಯಾಗಾರಗಳಿಗೆ ಸೆಂಟ್ರಲ್ ಹಾಲ್ ಮತ್ತು ಇತರೆ ಸೌಕರ್ಯಗಳನ್ನು ಬಳಸುವ ಬಗ್ಗೆ ಚಿಂತನೆ ನಡೆಸಲಾಗಿದೆ’ ಎಂದು ಯು.ಟಿ.ಖಾದರ್ ಹೇಳಿದರು.

ಕಟ್ಟಡದಲ್ಲಿ ಲೋಪ:

‘ಬೆಂಗಳೂರಿನ ವಿಧಾನಸೌಧಕ್ಕೂ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೂ ಹೋಲಿಕೆ ಮಾಡಲಾಗದು. ಬೆಂಗಳೂರಿನಲ್ಲಿ ಎಲ್ಲ ರೀತಿಯ ವ್ಯವಸ್ಥೆ ಇದೆ. ಇಲ್ಲಿನ ಪರಿಸ್ಥಿತಿ ಹಾಗಿಲ್ಲ. ಇದರ ವಿನ್ಯಾಸದಲ್ಲಿ ಲೋಪವಿದೆ. ಕೆಲವೆಡೆ ಸೋರುತ್ತಿದೆ. ಆಗಿನ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ. ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣದ ಬಗ್ಗೆ ಚರ್ಚಿಸುತ್ತೇವೆ. ಮುಖ್ಯಮಂತ್ರಿ ಅವರು ಈ ಬೇಡಿಕೆ ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದು ಬಸವರಾಜ ಹೊರಟ್ಟಿ ಹೇಳಿದರು.

‘ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತದೆಯೇ?’ ಎಂಬ ಪ್ರಶ್ನೆಗೆ, ‘ಉತ್ತರ ಕರ್ನಾಟಕದ ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ ಚರ್ಚೆಯಾಗಲಿವೆ’ ಎಂದರು.

‘ಮುಂದಿನ ವರ್ಷ ರಾಜ್ಯಪಾಲರನ್ನು ಇಲ್ಲಿಗೆ ಆಹ್ವಾನಿಸಿ, ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ನಡೆಸಲು ಪ್ರಯತ್ನಿಸುತ್ತೇವೆ. ಈ ಬಾರಿಯ ಅಧಿವೇಶನದಲ್ಲೂ ಸಾಧ್ಯವಾದಷ್ಟು ಎಲ್ಲ ರೀತಿಯ ಖರ್ಚು–ವೆಚ್ಚ ಕಡಿಮೆಗೊಳಿಸುತ್ತೇವೆ’ ಎಂದೂ ಹೇಳಿದರು.

‘ಮಹಾರಾಷ್ಟ್ರದ ನಾಗ್ಪುರಕ್ಕೆ ಭೇಟಿ ನೀಡಿ, ಅಲ್ಲಿನ ವಿಧಾನಸೌಧ ಮತ್ತು ಶಾಸಕರ ಭವನ ಪರಿಶೀಲಿಸುತ್ತೇವೆ. ಇಲ್ಲಿಯೂ ಅದೇ ಮಾದರಿ ಸೌಲಭ್ಯಗಳು ಬೇಕಿವೆ. ಸೌಧದ ಪ್ರತಿ ಮಹಡಿಯಲ್ಲಿ ವಿವಿಧ ಇಲಾಖೆಗಳ ಎರಡು ಕಚೇರಿಗಳು ಇರಬೇಕು. ಇದರಿಂದ ಕಟ್ಟಡದ ನಿರ್ವಹಣೆಗೆ ಅನುಕೂಲವಾಗುತ್ತದೆ. ಕೆಲವು ಕೊಠಡಿಗಳನ್ನು ಕಾಯ್ದಿರಿಸುವ ಮೂಲಕ ಶಾಸಕರ ಭವನವನ್ನು ಹೋಟೆಲ್ ಆಗಿಯೂ ಬಳಸಬಹುದು’ ಎಂದು ಅವರು ಹೇಳಿದರು.

‘ಈ ಬಾರಿ ಅಧಿವೇಶನದಲ್ಲಿ ಸೌಧದಲ್ಲಿ ಜವಾಹರಲಾಲ್ ನೆಹರೂ ಭಾವಚಿತ್ರ ಅಳವಡಿಸಲಾಗುತ್ತದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಹೊರಟ್ಟಿ, ‘ಈ ಬಗ್ಗೆ ಚರ್ಚಿಸುತ್ತೇವೆ’ ಎಂದರು.

‘ಪ್ರತಿಭಟನಾಕಾರರ ಜತೆ ಚರ್ಚಾ ವೇದಿಕೆ’

‘ಸದನದ ಹೊರಗೆ ಪ್ರತಿಭಟನೆಗಳು ನಡೆಯುವ ವಿಚಾರವಾಗಿ ಕೆಲವು ಸಚಿವರು, ಶಾಸಕರಿಗೆ ಬೇಸರವಿದೆ. ಪ್ರತಿಭಟನೆಗಳ ಪ್ರಮಾಣ ಕಡಿಮೆಯಾದರೆ, ವ್ಯವಸ್ಥಿತವಾಗಿ ಅಧಿವೇಶನ ನಡೆಸಲು ಹೆಚ್ಚಿನ ಸಮಯ ಸಿಗುತ್ತದೆ. ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ. ಹೀಗಾಗಿ ಮುಂಚಿತವಾಗಿಯೇ ಪ್ರತಿಭಟನಾಕಾರರನ್ನು ಕರೆಯಿಸಿ, ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವಂತೆ ಸಚಿವರು ಮತ್ತು ಅಧಿಕಾರಿಗಳಿಗೆ ತಿಳಿಸುತ್ತೇವೆ’ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

‘ಪ್ರತಿಭಟನೆ ನಡೆಯಲೇ ಬಾರದು ಎಂದೇನಿಲ್ಲ. ಆದರೆ, ಸಕಾರಾತ್ಮಕವಾದವು ನಡೆಯಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.