ಬೆಂಗಳೂರು: ಮಾಧ್ಯಮಗಳು ಸಮಾಜ-ಸರ್ಕಾರದ ನಡುವೆ ಪ್ರಗತಿ ಹಾಗೂ ಸೌಹಾರ್ದದ ಸೇತುವೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ.ರವಿ ಅವರ ಸಂಪಾದಕತ್ವದ ‘ಮೀಡಿಯಾ ಆಫ್ ದಿ ಮಿಲೇನಿಯಂ’ ಕೃತಿಯನ್ನು ಬುಧವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಂವಿಧಾನದ ಮೌಲ್ಯಗಳನ್ನು ಕಾಪಾಡಲು ಪತ್ರಕರ್ತರು ಮುಂದಾಗಬೇಕು. ವೃತ್ತಿ ಧರ್ಮ ಕಾಪಾಡಿಕೊಂಡರೆ ಪತ್ರಿಕಾ ವೃತ್ತಿಗೆ ಘನತೆ ಬರುತ್ತದೆ. ಸಂವಿಧಾನ ಉಳಿದರೆ ಪತ್ರಿಕಾ ವೃತ್ತಿಯ ಸ್ವಾತಂತ್ರ್ಯವೂ ಉಳಿಯುತ್ತದೆ. ಮಾಧ್ಯಮ ಸಾಕ್ಷರತೆ ಕುರಿತ ರವಿ ಅವರ ಪುಸ್ತಕ ಮಾಧ್ಯಮ ಕ್ಷೇತ್ರದ ಅರಿವು ವಿಸ್ತರಿಸಲಿದೆ ಎಂದು ಹೇಳಿದರು.

ಭಾರತೀಯ ಮಾಧ್ಯಮ ಎದುರಿಸುತ್ತಿರುವ ಈಚಿನ ಸಮಸ್ಯೆಗಳಿಗೆ ಮಾಧ್ಯಮ ಸಾಕ್ಷರತೆ ಪರಿಹಾರ ಆಗಬಲ್ಲದು. ಹಾಗಾಗಿ, ಪದವಿಪೂರ್ವ ಹಂತದಿಂದಲೇ ಮಾಧ್ಯಮ ಸಾಕ್ಷರತೆಗೆ ಪೂರಕವಾದ ಪಠ್ಯಗಳನ್ನು ಅಳವಡಿಸಬೇಕು ಎಂದು ಬಿ.ಕೆ. ರವಿ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದರು.

ಕರ್ನಾಟಕ ಮಾದರಿ ಅಭಿವೃದ್ಧಿ ಕುರಿತು ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಿದ್ದಪಡಿಸಿದ್ದ ಕಿರುಚಿತ್ರವನ್ನು ಮುಖ್ಯಮಂತ್ರಿ ಎದುರು ಪ್ರದರ್ಶಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.