ಹೊಸಪೇಟೆ: ಹತ್ತು ಜನ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ನಗರದಲ್ಲಿ ರಕ್ತದಾನ ಮಾಡಿದರು.

ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಕಲಬುರ್ಗಿ ವಿಭಾಗದ ಸಂಚಾಲಕ ನಿಂಬಗಲ್ ರಾಮಕೃಷ್ಣ ಅವರೊಂದಿಗೆ ಜಿ.ರಾಘವೇಂದ್ರ, ವಿನಾಯಕ ಶೆಟ್ಟರ್, ಕೊಟ್ರೇಶ್, ಕೇಶವ, ಬಾಣದ ಗಣೇಶ, ಶಾಂತಕುಮಾರ್, ಮಂಜುನಾಥ, ಕ್ಯಾರೋಲಿನ್ ಸ್ಮಿತ್, ಮಂಗಳಗೌರಿ ಸ್ವಯಂಪ್ರೇರಣೆಯಿಂದ ರಕ್ತ ನೀಡಿದರು.

‘ಕೊರೊನಾದಿಂದ ಉದ್ಭವಿಸಿರುವ ಬಿಕ್ಕಟ್ಟಿನಿಂದ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಸಂಗ್ರಹ ದಿನೇ ದಿನೇ ಕಡಿಮೆಯಾಗುತ್ತಿದೆ. ಪಕ್ಷದ ಕಾರ್ಯಕರ್ತರು ರಕ್ತದಾನ ಮಾಡಬೇಕೆಂದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ ಸೂಚನೆ ಕೊಟ್ಟಿದ್ದರು. ಅದರಂತೆ ಹತ್ತು ಜನ ಕಾರ್ಯಕರ್ತರು ಸ್ವಯಂಪ್ರೇರಣೆಯಿಂದ ಮುಂದೆ ಬಂದು ರಕ್ತದಾನ ಮಾಡಿದ್ದಾರೆ’ ಎಂದು ನಿಂಬಗಲ್ ರಾಮಕೃಷ್ಣ ತಿಳಿಸಿದರು. ರಕ್ತನಿಧಿ ಕೇಂದ್ರದ ಡಾ. ಸುಲೋಚನಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.