ಬೆಂಗಳೂರು: ಸರ್ಕಾರಕ್ಕೆ ಬಹುಮತ ಇಲ್ಲ ಎಂದು ವಿರೋಧ ಪಕ್ಷದವರು ಅಡ್ಡಿಪಡಿಸಿದ್ದರಿಂದ ವಿಧಾನ ಪರಿಷತ್ ಕಲಾಪವನ್ನು ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರು ಮಧ್ಯಾಹ್ನ 12 ಗಂಟೆವರೆಗೆ ಮುಂದೂಡಿದರು.

ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, 'ಆಡಳಿತ ಪಕ್ಷದ ಶಾಸಕರೇ ಸರ್ಕಾರದ ಮೇಲೆ ವಿಶ್ವಾಸ ಹೊಂದಿಲ್ಲ. ಬಹುಮತ ಇಲ್ಲದಿರುವುದರಿಂದ ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕು' ಎಂದು ಒತ್ತಾಯಿಸಿದರು. 'ರಾಜ್ಯಪಾಲರ ಭಾಷಣವು ಸುಳ್ಳು ಆಶ್ವಾಸನೆಗಳಿಂದ ಕೂಡಿದೆ' ಎಂದು ಆರೋಪಿಸಿದರು.

ಇದಕ್ಕೆ ಎದಿರೇಟು ನೀಡಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ, 'ಸರ್ಕಾರ ಬೀಳಲಿದೆ ಎಂಬುದು ಬರಿ ನಿಮ್ಮ ಕಲ್ಪನೆಯೇ ಅಥವಾ ರಾತ್ರಿ ಏನಾದರೂ ಕನಸು ಬಿದ್ದಿತ್ತಾ' ಎಂದು ಛೇಡಿಸಿದರು.

'ಯಾರೂ ರಾಜೀನಾಮೆ ಕೊಡುವುದಿಲ್ಲ. ಸರ್ಕಾರವನ್ನು ನಡೆಸಲು ಬಿಡಿ. ವೃಥಾ ಸಮಯ ವ್ಯರ್ಥ ಮಾಡಬೇಡಿ. ರಾಜ್ಯದಲ್ಲಿ ಬರಗಾಲ ಇದೆ. ಜನ ಸಾಯುತ್ತಿದ್ದಾರೆ. ಆ ಬಗ್ಗೆ ಚರ್ಚೆ ಮಾಡಿ. ಸದನ ನಡೆಸಲು ಅವಕಾಶ ನೀಡಿ' ಎಂದು ಮನವಿ ಮಾಡಿದರು.

ಅಷ್ಟರಲ್ಲಿ ಬಿಜೆಪಿ ಸದಸ್ಯರು ಎದ್ದು ನಿಂತು ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಸಭಾಪತಿಯವರ ಪೀಠದ ಎದುರು ಧರಣಿ ಆರಂಭಿಸಿದರು.

ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷಗಳ ಸದಸ್ಯರು ಪರಸ್ಪರ ಧಿಕ್ಕಾರ ಕೂಗಿದ್ದರಿಂದ ಗದ್ದಲದ ವಾತಾವರಣ ನಿರ್ಮಾಣವಾಯಿತು. ಸಭಾಪತಿಯವರು ಕಲಾಪವನ್ನು ಮಧ್ಯಾಹ್ನ 12ರವರೆಗೆ ಮುಂದೂಡಿದರು.

ಭಿತ್ತಿಪತ್ರ ಪ್ರದರ್ಶನ: ಸಭಾಪತಿಯವರು ಕಲಾಪವನ್ನು ಮುಂದೂಡಿದ ಬಳಿಕ ಬಿಜೆಪಿ ಸದಸ್ಯರು ಸದನದಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

‘ಹಿಂದೂ ವಿರೋಧಿ ಸರ್ಕಾರಕ್ಕೆ ಧಿಕ್ಕಾರ’, ‘ಬಿಜೆಪಿಗೆ ವೋಟು ಹಾಕುವವರು ಮುಸ್ಲೀಮರಲ್ಲ- ಜಮೀರ್’,‘ವರ್ಗಾವಣೆ ದಂಧೆಯಲ್ಲಿ ತೊಡಗಿರೋ ಸರ್ಕಾರ’,‘10% ಸರ್ಕಾರ..... ಪುಟ್ಟರಂಗ ಶೆಟ್ಟಿ’ಎಂಬ ಘೋಷವಾಕ್ಯಗಳಿರುವ ಭಿತ್ತಿ ಪತ್ರಗಳನ್ನು ಬಿಜೆಪಿ ಸದಸ್ಯರು ಪ್ರದರ್ಶಿಸಿದರು.

ಸದನದ ಸುಗಮ ಕಲಾಪಕ್ಕೆ ಅಡ್ಡಿಪಡಿಸಿದರೆ ಬಿಜೆಪಿ ಶಾಸಕರ ಅಮಾನತು ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.