ಚಾಮರಾಜನಗರ:

ತಾಲ್ಲೂಕಿನ ಅಮಚವಾಡಿ-ಚೆನ್ನಪ್ಪನಪುರ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ನಡೆದ ರಥೋತ್ಸವ ಸಂದರ್ಭದಲ್ಲಿ ರಥ ಪಲ್ಟಿಯಾಗಿದೆ. ಅದೃಷ್ಟವಶಾತ್ ಸಾವು- ನೋವು ಸಂಭವಿಸಿಲ್ಲ.

ಆರು ಶತಮಾನಗಳಿಂತಲೂ ಹಳೆಯದಾದ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಎರಡು ವರ್ಷಗಳ ಬಳಿಕ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ರಥೋತ್ಸವ ಆರಂಭವಾಯಿತು.

ದೇವಾಲಯದ ಆವರಣದಲ್ಲಿ ಒಂದು ಸುತ್ತು ರಥ ಎಳೆಯಬೇಕಿತ್ತು. ತೇರು ಅರ್ಧದವರೆಗೆ ತಲುಪಿದಾಗ ಅದರ ಚಕ್ರದ ಪಟ್ಟಿ (ದೂರಿ) ತುಂಡಾಯಿತು. ಈ ಸಂದರ್ಭದಲ್ಲಿ ತೇರು ನಿಧಾನವಾಗಿ ಕೆಳಕ್ಕೆ ವಾಲಿತು. ಈ ಸಂದರ್ಭದಲ್ಲಿ ಅರ್ಚಕರು ಸೇರಿ ನಾಲ್ವರು ಸಿಕ್ಕಿಹಾಕಿಕೊಂಡರು.

'ತೇರಿನ ಗೋಪುರವನ್ನು ಬಿದಿರಿನಿಂದ ಮಾಡಿದ್ದರಿಂದ ತೇರು ಹೆಚ್ಚು ಭಾರವಿರಲಿಲ್ಲ. ಹಾಗಾಗಿ ಪೊಲೀಸರು ಹಾಗೂ ಭಕ್ತರು ತೇರನ್ನು ಮೇಲಕ್ಕೆತ್ತಿ ದೇವಾಲಯದ ಗೋಡೆಗೆ ವಾಲಿಸಿ ಇಟ್ಟರು. ಸ್ವಲ್ಪ ಹೊತ್ತು ನಿಂತಿದ್ದ ರಥ ಮತ್ತೆ ರಥ ಕೆಳಕ್ಕೆ ಬಿದ್ದಿದೆ' ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದರು.

ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ರಥೋತ್ಸವದಲ್ಲಿ ಸೇರಿದ್ದರು. ಯಾರಿಗೂ ಏನೂ ಆಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.