ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಇಳಿಕೆಯ ಕೇಂದ್ರ @BJP4India ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಆದರೆ @narendramodi ಅವರು ಪ್ರಧಾನಿಯಾಗುವ ಮೊದಲಿದ್ದ ಅಬಕಾರಿ ಸುಂಕಕ್ಕೆ ಸಮನಾಗಿ ತೆರಿಗೆ ಕಡಿತ ಮಾಡಬಹುದು ಎಂಬ ನನ್ನ ನಿರೀಕ್ಷೆ ಹುಸಿಯಾಗಿದೆ. 1/3#petrolPrice
ಯು.ಪಿ.ಎ ಸರ್ಕಾರದ ಕೊನೆ ಅವಧಿಯಲ್ಲಿ (2014ರ ಆರಂಭದಲ್ಲಿ) ಡೀಸೆಲ್ ಮೇಲೆ ರೂ.3.45 ಹಾಗೂ ಪೆಟ್ರೋಲ್ ಮೇಲೆ ರೂ.9.20 ಅಬಕಾರಿ ಸುಂಕ ಇತ್ತು, @narendramodi ಅವರು ಪ್ರಧಾನಿಯಾದ ಮೇಲೆ ಡೀಸೆಲ್ ಮೇಲೆ ರೂ. 31.84 ಹಾಗೂ ಪೆಟ್ರೋಲ್ ಮೇಲೆ ರೂ. 32.98 ಗೆ ತೆರಿಗೆ ಏರಿಸಲಾಗಿತ್ತು. 2/3#petrolPrice
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಒಂದರಲ್ಲೇ ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ @BJP4India ಸರ್ಕಾರ 23 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿದೆ. ಕೊರೊನಾ ಆರ್ಭಟದ ನಂತರ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಜನ ಸಾಮಾನ್ಯರಿಗೆ ಈ ತೆರಿಗೆ ಕಡಿತ ಕೊಂಚ ನಿರಾಳತೆ ಉಂಟುಮಾಡಿದೆ, ಪೂರ್ಣ ಪ್ರಮಾಣದ್ದಲ್ಲ. 3/3#petrolPrice