ಬೆಂಗಳೂರು: ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಗಣೇಶ್ಗೆ ವಿಧಿಸಲಾಗಿದ್ದ ಅಮಾನತನ್ನು ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಕಾಂಗ್ರೆಸ್ ಬುಧವಾರ ಹಿಂಪಡೆದಿದೆ.

ಎಐಸಿಸಿ ರಾಜ್ಯ ಉಸ್ತುವಾರಿಕೆ.ಸಿ ವೇಣುಗೋಪಾಲ್, ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದದಿನೇಶ್ ಗುಂಡೂರಾವ್ ಅವರು ಸಮಾಲೋಚನೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.

ಸದ್ಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುವ ಪ್ರಯತ್ನ ನಡೆಸುತ್ತಿದೆ. ಅದರ ಭಾಗವಾಗಿ ಬುಧವಾರ ಗಣೇಶ್ ವಿರುದ್ಧದ ಅಮಾನತು ಹಿಂಪಡೆಯಲಾಗಿದೆ.

ಇದನ್ನೂ ಓದಿ:ಅಮಾನತು ವಾಪಾಸ್ ಪಡೆಯುವಂತೆ ಕೆಪಿಸಿಸಿಗೆ ಕೇಳಲ್ಲ: ಶಾಸಕ ಜೆ.ಎನ್. ಗಣೇಶ್

ಕೆಲ ತಿಂಗಳ ಹಿಂದೆ ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿ ಕಾಂಗ್ರೆಸ್ ಪಕ್ಷದ ಅನೌಪಚಾರಿಕ ಶಾಸಕಾಂಗ ಸಭೆ ನಡೆದಿತ್ತು. ಈ ವೇಳೆ ಶಾಸಕ ಆನಂದ್ ಸಿಂಗ್ ಮತ್ತು ಗಣೇಶ್ ನಡುವೆ ಹೊಡೆದಾಟ ಸಂಭವಿಸಿತ್ತು. ಈ ಘಟನೆ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದ ಹಿನ್ನೆಲೆಯಲ್ಲಿ ಗಣೇಶ್ ಅವರನ್ನು ಪಕ್ಷ ಅಮಾನತು ಮಾಡಿತ್ತು. ಅಲ್ಲದೆ, ಆಂತರಿಕ ವಿಚಾರಣೆಯನ್ನೂ ನಡೆಸಿತ್ತು. ನಂತರದಲ್ಲಿ ಗಣೇಶ್ ಬಂಧನ, ಸೆರೆವಾಸ, ಬಿಡುಗಡೆಯಂಥ ಬೆಳವಣಿಗೆಗಳೂ ನಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.