ಬೆಂಗಳೂರು: ರಸ್ತೆ, ಕಟ್ಟಡ ಮತ್ತಿತರ ನಿರ್ಮಾಣಗಳು ಮಾತ್ರವೇ ಅಭಿವೃದ್ಧಿಯಲ್ಲ. ಸಾಮಾನ್ಯ ವ್ಯಕ್ತಿಯ ಅಭ್ಯುದಯವೇ ನೈಜ ಅಭಿವೃದ್ಧಿ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ವಿಧಾನಸಭೆಯಲ್ಲಿ ಶುಕ್ರವಾರ ವಿದಾಯದ ಮಾತುಗಳನ್ನಾಡಿ,‘ ಹೈಟೆಕ್ ಬಸ್ಸು, ಆಸ್ಪತ್ರೆ ಮತ್ತು ಶಾಲೆಗಳನ್ನು ನೋಡಿ ಆನಂದಪಡಬಹುದು. ಆದರೆ, ಸಾಮಾನ್ಯ ಜನರಿಗೆ ಅವು ಎಟುಕುತ್ತವೆಯೇ? ಅವೆಲ್ಲ ಅವರಿಗೆ ಸಿಗದಿದ್ದರೆ, ಅದನ್ನು ಅಭಿವೃದ್ಧಿ ಎಂದು ಹೇಳಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ನಮ್ಮ ಸರ್ಕಾರ ಕಷ್ಟದ ಸಂದರ್ಭದಲ್ಲಿ ನಡೆಯಿತು. ಯಡಿಯೂರಪ್ಪ ಅವರು ಪ್ರವಾಹ ,ಕೋವಿಡ್ ಸಂದರ್ಭದಲ್ಲಿ ನಿರ್ವಹಿಸಿದ ಕೆಲಸ ನೋಡಿದರೆ ಅವರನ್ನು ಯಾವುದೇ ಮುಖ್ಯಮಂತ್ರಿ ಸರಿಗಟ್ಟಲು ಸಾಧ್ಯವಿಲ್ಲ. ಬಡವರು, ನೊಂದವರು, ಸಂತ್ರಸ್ತರಿಗೆ ಧಾರಾಳವಾಗಿ ಅನುದಾನ ನೀಡಿದರು. ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ತಲಾ ₹5 ಲಕ್ಷ, ₹3 ಲಕ್ಷ ಪ್ರಕಟಿಸಿದರು. ಕಿಸಾನ್ ಸಮ್ಮಾನ್ ಅಡಿ ರೈತರಿಗೆ ಹೆಚ್ಚುವರಿಯಾಗಿ ತಲಾ ₹4,000 ಘೋಷಿಸಿದರು. ಇಂತಹ ದಿಟ್ಟ ತೀರ್ಮಾನವನ್ನು ದೇಶದ ಯಾವುದೇ ಮುಖ್ಯಮಂತ್ರಿ ತೆಗೆದುಕೊಳ್ಳಲಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.