ಬೆಂಗಳೂರು: ಗರ್ಭಧಾರಣೆ ತಡೆಗೆ ಕಾಪರ್–ಟಿ ಹಾಗೂ ಮಾತ್ರೆ ಬಳಸಲು ಮನಸ್ಸು ಮಾಡದ ಮಹಿಳೆಯರಿಗಾಗಿ ಆರೋಗ್ಯ ಇಲಾಖೆ ‘ಗರ್ಭನಿರೋಧಕ ಚುಚ್ಚುಮದ್ದು’ ಯೋಜನೆ ಆರಂಭಿಸಿದೆ. ಒಂದೇ ವರ್ಷದಲ್ಲಿ 10,172 ಮಂದಿ ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ.

ಮೊದಲ ಮಗುವಿನ ನಂತರ ಎರಡನೇ ಮಗು ಪಡೆಯುವ ಮುನ್ನ ಕನಿಷ್ಠ ಮೂರು ವರ್ಷಗಳ ಅಂತರ ಇರಬೇಕು ಎನ್ನುವ ಕಾರಣದಿಂದ ಆರೋಗ್ಯ ಇಲಾಖೆ ಈ ಯೋಜನೆ ಆರಂಭಿಸಿದೆ. ಗರ್ಭತಡೆಗೆ ವರ್ಷದಲ್ಲಿ ನಾಲ್ಕು ಡೋಸ್ಗಳಲ್ಲಿ ಈ ಚುಚ್ಚುಮದ್ದು ಹಾಕಿಸಿಕೊಳ್ಳಬೇಕು. ದಾವಣಗೆರೆಯಲ್ಲಿ 2017–18ರಲ್ಲಿ ಒಂದು ವರ್ಷದ ಅವಧಿಗೆ 878 ಜನರು ಈ ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ. ಹಾವೇರಿಯಲ್ಲಿ 48 ಮಂದಿ ಮಾತ್ರ ಆಸಕ್ತಿತೋರಿದ್ದಾರೆ.

‘ಗರ್ಭತಡೆಗೆ ಸಾಕಷ್ಟು ವಿಧಾನಗಳು ಇವೆ. ಚುಚ್ಚುಮದ್ದು ಪಡೆಯುವುದು ಸಹ ಅವುಗಳಲ್ಲಿ ಒಂದು. ಇದರಿಂದ ಯಾವುದೇ ಅಡ್ಡಪರಿಣಾಮ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚುಚ್ಚುಮದ್ದು ಹಾಕಿಸಿಕೊಳ್ಳಬಹುದು. ಯೋಜನೆ ಆರಂಭವಾದ ಒಂದು ವರ್ಷದಲ್ಲಿಯೇ ಇಷ್ಟು ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಒಳ್ಳೆಯ ಬೆಳವಣಿಗೆ’ ಎಂದು ಆರೋಗ್ಯ ಇಲಾ ಖೆಯ ಮಹಿಳೆಯರ ಕಲ್ಯಾಣ ವಿಭಾಗದ ಮುಖ್ಯಸ್ಥ ಡಾ. ರಾಜ್ಕುಮಾರ್ ಹೇಳಿದರು.

‘ಕಾಪರ್–ಟಿ, ಗರ್ಭನಿರೋಧಕ ಮಾತ್ರೆ ಸೇರಿದಂತೆ ಬೇರೆ ಬೇರೆ ವಿಧಾನಗಳ ಬಗ್ಗೆ ಅಂಜಿಕೆ ಇರುವವರು ಈ ವಿಧಾನವನ್ನು ಸುಲಭವಾಗಿ ಅನುಸರಿಸಬಹುದು’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.