ಬೆಂಗಳೂರು: ಕೋವಿಡ್ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯು ₹181 ಕೋಟಿ ವೆಚ್ಚದಲ್ಲಿ ಮಲ್ಟಿಪಾರಾ ಮಾನಿಟರ್ಗಳನ್ನು ಖರೀದಿಸಲಾಗಿದ್ದು, ಇದರಲ್ಲಿ ₹124.78 ಕೋಟಿಯಷ್ಟು ಅಕ್ರಮ ನಡೆದಿದೆ. ಇದರಲ್ಲಿ ಖರೀದಿ ಸಂಸ್ಥೆ, ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರವೇ ಭಾಗಿಯಾಗಿದೆ ಎಂದು ನ್ಯಾಯಮೂರ್ತಿ ಜಾನ್ ಮೈಕಲ್ ಡಿಕುನ್ಹ ಆಯೋಗದ ವರದಿ ಹೇಳಿದೆ.

ನ್ಯಾ. ಡಿಕುನ್ಹ ಆಯೋಗವು ಸಲ್ಲಿಸಿರುವ ಮಧ್ಯಂತರ ವರದಿಯ ಮೂರನೇ ಭಾಗದಲ್ಲಿ ಈ ವಿವರಣೆ ಇದೆ. ವರದಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಖರೀದಿ ಪ್ರಕ್ರಿಯೆಗಳು ನಡೆದಿದ್ದವು.

ಐಸಿಯು ಬೆಡ್ಗಳಲ್ಲಿ ರೋಗಿಯ ರಕ್ತದೊತ್ತಡ, ಹೃದಯದ ಬಡಿತ ಮತ್ತಿತರ ವಿವರಗಳನ್ನು ತೋರಿಸುವ ಮಾನಿಟರ್ಗಳನ್ನು ‘ಮಲ್ಟಿಪಾರಾ ಮಾನಿಟರ್’ ಎಂದು ಕರೆಯಲಾಗುತ್ತದೆ. ಕೋವಿಡ್ ಅವಧಿಯಲ್ಲಿ ಇಂತಹ ಒಟ್ಟು 3,969 ಮಾನಿಟರ್ಗಳನ್ನು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು (ಡಿಎಂಇ) ಖರೀದಿಸಿತ್ತು.

ಕೋವಿಡ್ ಅವಧಿಯಲ್ಲೇ ಬಿಬಿಎಂಪಿಯು ಮಲ್ಟಿಪಾರಾ ಲೋ ಎಂಡ್ ಮಾನಿಟರ್ಗಳನ್ನು ತಲಾ ಒಂದಕ್ಕೆ ₹36,499ರಂತೆ ಖರೀದಿಸಿದೆ. ಹೀಗಿದ್ದೂ, ರಾಜ್ಯ ಸರ್ಕಾರವು ಈ ಮಾನಿಟರ್ಗಳನ್ನು ತಲಾ ಒಂದಕ್ಕೆ ಗರಿಷ್ಠ ₹1.50 ಲಕ್ಷ ನೀಡಿ ಖರೀದಿಸಬಹುದು ಎಂದು ಮಿತಿ ಹೆಚ್ಚಿಸಿದೆ. ಆದರೆ ಡಿಎಂಇ ಈ ಮಿತಿಯನ್ನೂ ಉಲ್ಲಂಘಿಸಿ, ತಲಾ ಒಂದಕ್ಕೆ ₹2.85 ಲಕ್ಷ ನೀಡಿ ಇಂತಹ ಮಾನಿಟರ್ಗಳನ್ನು ಖರೀದಿಸಿದೆ ಎಂಬ ಮಾಹಿತಿ ವರದಿಯಲ್ಲಿ ಇದೆ.
.ಕೋವಿಡ್ ಅಕ್ರಮ ತನಿಖೆಯ ಹೂರಣ– 1 | ಸಿ.ಟಿ ಸ್ಕ್ಯಾನ್: ₹15.83 ಕೋಟಿ ಅಕ್ರಮ.
‘ಲೋ ಎಂಡ್ ಮಾನಿಟರ್ಗಳ ಖರೀದಿ ಟೆಂಡರ್ನಲ್ಲಿ ತಲಾ ಒಂದು ಯಂತ್ರಕ್ಕೆ ₹1.30 ಲಕ್ಷ, ₹1.50 ಲಕ್ಷ ಮತ್ತು ₹2.92 ಲಕ್ಷಕ್ಕೆ ಕಂಪನಿಗಳು ಬಿಡ್ ಸಲ್ಲಿಸಿದ್ದವು. ಅಧಿಕಾರಿಗಳು ಕಡಿಮೆ ಮೊತ್ತದ ಬಿಡ್ಗಳನ್ನು ತಿರಸ್ಕರಿಸಿ, ಎನ್ಕಾರ್ಟಾ ಫಾರ್ಮಾ ಕಂಪನಿಯ ₹2.85 ಲಕ್ಷದ ಬಿಡ್ ಒಪ್ಪಿಕೊಂಡಿದ್ದಾರೆ. ಕಂಪನಿಯು 355 ಮಾನಿಟರ್ಗಳನ್ನು ₹2.85 ಲಕ್ಷಕ್ಕೆ ಪೂರೈಸಲು ಮತ್ತು 200 ಮಾನಿಟರ್ಗಳನ್ನು ಉಚಿತವಾಗಿ ನೀಡಲು ಒಪ್ಪಿಕೊಂಡಿದೆ’ ಎಂದು ವರದಿ ವಿವರಿಸಿದೆ.

‘ಮೇಲ್ನೋಟಕ್ಕೆ 200 ಮಾನಿಟರ್ಗಳು ಉಚಿತವಾಗಿ ಸಿಗುತ್ತವೆ ಎಂದು ತೋರಿದರೂ ಸರ್ಕಾರಕ್ಕೆ ನಷ್ಟವಾಗಿದೆ. 555 ಮಾನಿಟರ್ಗಳನ್ನು ₹1.50 ಲಕ್ಷಕ್ಕೆ ಖರೀದಿಸಿದ್ದರೆ, ಅದರ ಮೊತ್ತ ₹8.32 ಕೋಟಿಯಾಗುತ್ತಿತ್ತು. ಆದರೆ 355 ಮಾನಿಟರ್ಗಳನ್ನು ₹2.85 ಲಕ್ಷಕ್ಕೆ ಖರೀದಿಸಿದ್ದರ ಮೊತ್ತ ₹10.11 ಕೋಟಿಯಾಗುತ್ತದೆ. ಇಲ್ಲಿ ಸರ್ಕಾರಕ್ಕೆ ನಷ್ಟವೇ ಆಗಿದೆ. ಇದರ ಜತೆಯಲ್ಲಿ ಅನುಮತಿ ಇಲ್ಲದೆಯೇ 142 ಮಾನಿಟರ್ಗಳನ್ನು ಮತ್ತೆ ₹2.85 ಲಕ್ಷಕ್ಕೆ ಖರೀದಿಸಲು ಎನ್ಕಾರ್ಟಾ ಕಂಪನಿಗೆ ಆದೇಶ ನೀಡಲಾಗಿದೆ’ ಎಂದು ವರದಿ ವಿವರಿಸಿದೆ.

‘ಈ ಅಕ್ರಮ ಮತ್ತೂ ಮುಂದುವರೆದಿದ್ದು, 2020ರಿಂದ 2022ರ ಅವಧಿಯಲ್ಲಿ ಇದೇ ಮೊತ್ತಕ್ಕೆ ಒಟ್ಟು 846 ಮಾನಿಟರ್ಗಳನ್ನು ಖರೀದಿಸಲಾಗಿದೆ. ಇವುಗಳಲ್ಲಿ 675 ಮಾನಿಟರ್ಗಳು ಅನಗತ್ಯವಾಗಿದ್ದವು. ಹಲವು ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಖರೀದಿಗೂ ಮುನ್ನವೇ ಇಂತಹ ಮಾನಿಟರ್ಗಳನ್ನು ಅಳವಡಿಸಲಾಗಿದೆ. ಪೂರೈಕೆದಾರರಿಗೆ ಅಕ್ರಮ ಲಾಭ ಮಾಡಿಕೊಡಲು ಅನಗತ್ಯವಾಗಿ 1,727 ಹೈಎಂಡ್ ಮಾನಿಟರ್ಗಳನ್ನು ಖರೀದಿಸಿ, ಆ ಮಾನಿಟರ್ಗಳಿಗೆಂದೇ ನಂತರದ ದಿನಗಳಲ್ಲಿ ನೂರಾರು ಕೋಟಿ ವೆಚ್ಚ ಮಾಡಿ ಐಸಿಯು ಬೆಡ್ ಮತ್ತು ವೆಂಟಿಲೇಟರ್ಗಳನ್ನು ಖರೀದಿಸಲಾಗಿದೆ. ಈ ಕಡು ಅಕ್ರಮದಲ್ಲಿ ಸರ್ಕಾರ, ಸರ್ಕಾರಿ ಅಧಿಕಾರಿಗಳು ಮತ್ತು ಪೂರೈಕೆದಾರ ಕಂಪನಿಗಳು ಅಪವಿತ್ರ ಒಪ್ಪಂದ ಮಾಡಿಕೊಂಡಿರುವ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ವರದಿ ಶಿಫಾರಸು ಮಾಡಿದೆ.

‘ಎನ್ಕಾರ್ಟಾ ಲಾಭಕ್ಕಾಗಿ ನೂರಾರು ಕೋಟಿ ಅನಗತ್ಯ ಖರೀದಿ’

‘200 ಮಾನಿಟರ್ಗಳನ್ನು ‘ಉಚಿತ’ವಾಗಿ ನೀಡಿದ ಎನ್ಕಾರ್ಟಾ ಕಂಪನಿಗೆ ಅನುಕೂಲ ಮಾಡಿಕೊಡಲು ಮಲ್ಟಿಪಾರಾ ಮಾನಿಟರ್ ಹೈಎಂಡ್ ಅವತರಣಿಕೆ ಖರೀದಿಯಲ್ಲೂ ಭಾರಿ ಅಕ್ರಮ ಎಸಗಲಾಗಿದೆ’ ಎಂದು ವರದಿ ಹೇಳಿದೆ.

‘ಮಲ್ಟಿಪಾರಾ ಮಾನಿಟರ್ನ ‘ಹೈ ಎಂಡ್’ ಅವತರಣಿಕೆಯು ಮಾರುಕಟ್ಟೆಯಲ್ಲಿ ತಲಾ ಒಂದಕ್ಕೆ ₹3.28 ಲಕ್ಷದಿಂದ ₹3.88 ಲಕ್ಷ ದರದಲ್ಲಿ ಲಭ್ಯವಿದ್ದವು. ಈ ಮಾನಿಟರ್ಗಳ ಖರೀದಿಗೆ 2020ರ ಮಾರ್ಚ್ನಲ್ಲಿ ಕರೆಯಲಾಗಿದ್ದ ಟೆಂಡರ್ಗೆ ನ್ಯೂಟೆಕ್ ಕಂಪನಿ ತಲಾ ಒಂದಕ್ಕೆ ₹4.60 ಲಕ್ಷ ಮತ್ತು ಶೇ 12ರಷ್ಟು ಜಿಎಸ್ಟಿ, ಬಿಪಿಎಲ್ ₹75,000 ಮತ್ತು ಸನ್ ಝೆನ್ ಎಂಟರ್ಪ್ರೈಸಸ್ ₹4.80 ಲಕ್ಷ ಮತ್ತು ಶೇ 12ರಷ್ಟು ಜಿಎಸ್ಟಿಯ ಬಿಡ್ ಸಲ್ಲಿಸಿದ್ದವು. ಸನ್ ಝೆನ್ನ ಬಿಡ್ (ಜಿಎಸ್ಟಿ ಸೇರಿ ₹5.30 ಲಕ್ಷ) ಒಪ್ಪಿಕೊಳ್ಳಲಾಗಿದೆ’ ಎಂದು ವರದಿ ವಿವರಿಸಿದೆ.

‘2021ರಲ್ಲಿ ಇಂಥದ್ದೇ ಟೆಂಡರ್ ಕರೆಯಲಾಗಿದೆ. ಆ ಟೆಂಡರ್ಗೆ ಐದು ಕಂಪನಿಗಳು ಬಿಡ್ ಸಲ್ಲಿಸಿದ್ದವು ಎಂದು ನಿರ್ದೇಶನಾಲಯವು ದಾಖಲೆ ಸಲ್ಲಿಸಿದೆ. ಬಿಡ್ನ ಮೂಲ ಪ್ರತಿಗಳು ಇಲ್ಲ. ಬದಲಿಗೆ ಒಂದೊಂದೇ ಬಿಡಿ ಹಾಳೆಯಲ್ಲಿ ಕಂಪನಿ ಹೆಸರು ಮತ್ತು ಬಿಡ್ನ ಮೊತ್ತವಷ್ಟೇ ಇರುವ ಐದು ಹಾಳೆಗಳನ್ನು ನಿರ್ದೇಶನಾಲಯ ಒದಗಿಸಿದೆ. ಇದರಲ್ಲಿ ಕಡಿಮೆ ಮೊತ್ತ ನಮೂದಿಸಿದ್ದ ನಾಲ್ಕು ಬಿಡ್ಗಳನ್ನು ತಿರಸ್ಕರಿಸಿ, ತಲಾ ₹5.35 ಲಕ್ಷದಂತೆ ಎನ್ಕಾರ್ಟಾ ಕಂಪನಿಯ ಬಿಡ್ ಅನ್ನು ಒಪ್ಪಿಕೊಳ್ಳಲಾಗಿದೆ’ ಎಂದು ವರದಿ ವಿವರಿಸಿದೆ. ‘ಎನ್ಕಾರ್ಟಾಗಾಗಿ ಅನುಕೂಲ ಮಾಡಿಕೊಡಲೆಂದೇ ಟೆಂಡರ್ ಪ್ರಹಸನವನ್ನು ನಡೆಸಲಾಗಿದೆ. ಸನ್ ಝೆನ್ ಮತ್ತು ಎನ್ಕಾರ್ಟಾ ಮೂಲಕ ವೈದ್ಯಕೀಯ ಶಿಕ್ಷಣ ಇಲಾಖೆಯು ಒಟ್ಟು 3,123 ಮಲ್ಟಿಪಾರಾ ಮಾನಿಟರ್ ಹೈ ಎಂಡ್ ಅವತರಣಿಕೆಗಳನ್ನು ಖರೀದಿಸಿದೆ. ಇವುಗಳಲ್ಲಿ 1,727 ಮಾನಿಟರ್ಗಳ ಖರೀದಿ ಅನಗತ್ಯವಾಗಿದ್ದು, ಇದಕ್ಕೆ ₹91.87 ಕೋಟಿ ವ್ಯರ್ಥ ಮಾಡಲಾಗಿದೆ. ಅಕ್ರಮ ಲಾಭ ಮಾಡಿಕೊಳ್ಳುವ ಉದ್ದೇಶದಿಂದಲೇ ಈ ರೀತಿಯ ಖರೀದಿ ನಡೆಸಲಾಗಿದೆ’ ಎಂದು ವರದಿ ಹೇಳಿದೆ.

ಪೂರೈಸಿದ್ದು ‘ಲೋ ಎಂಡ್’, ಬಿಲ್ ‘ಹೈ ಎಂಡ್’

ಮಲ್ಟಿಪಾರಾ ಮಾನಿಟರ್ಗಳ ಲೋ ಎಂಡ್ ಮತ್ತು ಹೈ ಎಂಡ್ ಅವತರಣಿಗೆಳ ಮಧ್ಯೆ ಇರುವುದು ಸಣ್ಣ ವ್ಯತ್ಯಾಸವಷ್ಟೇ. ಲೋ ಎಂಡ್ ಮಾನಿಟರ್ಗೆ ‘ಇಟಿಸಿಒ2’ ಎಂಬ ಉಪಕರಣ ಅಳವಡಿಸಿದರೆ ಅದು ಹೈ ಎಂಡ್ ಮಾನಿಟರ್ ಆಗುತ್ತದೆ.

ಆದರೆ ಈ ಕಂಪನಿಗಳು ಲೋ ಎಂಡ್ ಮಾನಿಟರ್ಗಳನ್ನು ಪೂರೈಸಿದ್ದು. ಕೆಲವಕ್ಕಷ್ಟೇ ‘ಇಟಿಸಿಒ2’ ಅಳವಡಿಸಿರುವ ದಾಖಲೆ ಸಲ್ಲಿಸಿವೆ. ಸಾವಿರಕ್ಕೂ ಹೆಚ್ಚು ಮಾನಿಟರ್ಗಳಿಗೆ ‘ಇಟಿಸಿಒ2’ ಅಳವಡಿಸಿದ ಬಗ್ಗೆ ದಾಖಲೆ ಇಲ್ಲ. ಆದರೆ ಹೈ ಎಂಡ್ ಮಾನಿಟರ್ಗಳ ಪೂರೈಕೆಗೇ ಬಿಲ್ ಸಲ್ಲಿಸಲಾಗಿದೆ. ಬಿಲ್ ಪಾವತಿಯೂ ಆಗಿದೆ. ಇಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿರುವ ಸಾಧ್ಯತೆ ಇದೆ. ಈ ಬಗ್ಗೆ ಕೂಲಂಕಶ ತನಿಖೆಯ ಅಗತ್ಯವಿದೆ ಎಂದು ವರದಿ ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.