ಬೆಂಗಳೂರು: ಹಿಂದುಳಿದ ವರ್ಗಗಳ ‘ಪ್ರವರ್ಗ 2ಬಿ’ಗೆ (ಮುಸ್ಲಿಂ ಮತ್ತು ಅದರಲ್ಲಿರುವ ಉಪ ಜಾತಿಗಳು) ನೀಡಿದ್ದ ಮೀಸಲಾತಿಯನ್ನು ತೆಗೆದು, ಒಕ್ಕಲಿಗರಿರುವ ‘ಪ್ರವರ್ಗ 3ಎ’ ಮತ್ತು ಪಂಚಮಸಾಲಿ ಲಿಂಗಾಯತರಿರುವ ‘ಪ್ರವರ್ಗ 3ಬಿ’ಗೆ ತಲಾ ಶೇ 2ರಂತೆ ಹಂಚಿರುವ ರಾಜ್ಯ ಸರ್ಕಾರ, ಈ ಪ್ರವರ್ಗಗಳ ಬದಲು ಹೊಸತಾಗಿ ‘ಪ್ರವರ್ಗ 2ಸಿ’ ಮತ್ತು ‘ಪ್ರವರ್ಗ 2ಡಿ’ ಸೃಜಿಸಿದೆ.

ಮಾರ್ಚ್ 24ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಕ್ಕಲಿಗರು ಮತ್ತು ಲಿಂಗಾಯತರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಿ ತೀರ್ಮಾನ ಕೈಗೊಳ್ಳಲಾಗಿತ್ತು.

ಲಿಂಗಾಯತರಿಗೆ ಶೇ 5ರಷ್ಟಿದ್ದ ಮೀಸಲಾತಿಯನ್ನು ಶೇ 7ಕ್ಕೆ, ಒಕ್ಕಲಿಗರಿಗೆ ಶೇ 4ರಷ್ಟಿದ್ದ ಮೀಸಲಾತಿಯನ್ನು ಶೇ 6ಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. 2 ಸಿ ಮತ್ತು 2 ಡಿ ಎಂದು ಹೊಸ ವರ್ಗೀಕರಣ ಮಾಡಲಾಗಿದೆ. ಇದರಲ್ಲಿ ಕೇವಲ ಎರಡು ಜಾತಿಗಳು ಮಾತ್ರ ಇಲ್ಲ. 2ಸಿ ಯಲ್ಲಿ (ಹಿಂದಿದ್ದ 3 ಎ ಪಟ್ಟಿಯಲ್ಲಿ) ಒಕ್ಕಲಿಗರು ಮಾತ್ರವಲ್ಲದೇ, ರೆಡ್ಡಿ, ಬಲಿಜ, ನಾಯ್ಡು, ಕೊಡವರು ಕೂಡ
ಇದ್ದಾರೆ.

2 ಡಿ ಪಟ್ಟಿಯಲ್ಲಿ(ಹಿಂದಿನ 3 ಬಿ) ವೀರಶೈವ, ಪಂಚಮಸಾಲಿ ಸೇರಿದಂತೆ ಲಿಂಗಾಯತರ ಉಪ ಪಂಗಡಗಳು, ಕ್ರಿಶ್ಚಿಯನ್, ಬಂಟ್, ಜೈನ(ದಿಗಂಬರ), ವೈಷ್ಣವ ಉಪ ಪಂಗಡಗಳೂ ಇವೆ.

ಹೊಸತಾಗಿ ‘ಪ್ರವರ್ಗ 2ಸಿ’ ಮತ್ತು ‘ಪ್ರವರ್ಗ 2ಡಿ’ಯನ್ನು ಸೃಜಿಸಿ, ಅಲ್ಲಿ ವಿವಿಧ ಜಾತಿ ಮತ್ತು ಉಪಜಾತಿಗಳನ್ನು ಸೇರಿಸಲಾಗಿತ್ತು.

ಪ್ರವರ್ಗ 3ಎ (ಹೊಸತಾಗಿ 2ಸಿ)

ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್ಕಾರ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ / ಗೌಡ ಹಳ್ಳಿಕಾರ್, ಕುಂಚಿಟಿಗ, ಗೌಡ, ಕಾಪು, ಹೆಗ್ಗಡೆ, ಕಮ್ಮ, ರಡ್ಡಿ, ಗೌಂಡರ್, ನಾಮಧಾರಿ ಗೌಡ, ಉಪ್ಪಿನ ಕೊಳಗ / ಉತ್ತಮ ಕೊಳಗ, ಕೊಡಗರು, ಬಲಿಜ, ಬಲಜಿಗ / ಬಣಜಿಗ / ಗೌಡಬಣಜಿಗ, ನಾಯ್ಡು, ತೆಲಗ ಬಲಿಜ /ತೆಲಗ ಬಣಜಿಗ, ಶೆಟ್ಟಿಬಲಿಜ / ಶೆಟ್ಟಿಬಣಜಿಗ / ಬಣಜಿಗ ಶೆಟ್ಟಿ, ದಾಸರ ಬಲಿಜ / ದಾಸರ ಬಲಜಿಗ/ ದಾಸರ ಬಣಜಿಗ / ದಾಸ ಬಣಜಿಗ, ಕಸ್ಬನ್ಮು ನ್ನೂರ / ಮುನ್ನಾರ್ / ಮುನ್ನೂರ್ ಕಾಪು, ಬಳೆಗಾರ / ಬಳೆ ಬಣಜಿಗ/ ಬಳೆ ಬಲಜಿಗ / ಬಳೆ ಚೆಟ್ಟಿ / ಬಣಗಾರ, ರೆಡ್ಡಿ (ಬಲಿಜ), ಜನಪ್ಪನ್, ಉಪ್ಪಾರ (ಬಲಿಜ), ತುಲೇರು (ಬಲಿಜ)

ಪ್ರವರ್ಗ 3ಬಿ (ಹೊಸತಾಗಿ 2ಡಿ)

ವೀರಶೈವ ಲಿಂಗಾಯತ, ಲಿಂಗಾಯತ ಉಪ ಜಾತಿಗಳಾದ– ಹೆಳವ, ಅಂಬಿಗ, ಭೋಯಿ, ಗಂಗಮತ, ಸುಣಗಾರ, ಅಗಸ, ಮಡಿವಾಳ, ಕುಂಬಾರ, ಕುರುಬ, ಬಜಂತ್ರಿ, ಬಂಡಾರಿ, ಹಡಪದ, ಕ್ಷೌರಿಕ, ನವಲಿಗ ನಾವಿ, ಅಕ್ಕಸಾಲಿ, ಬಡಿಗಾರ್, ಕಮ್ಮಾರ, ಕಂಸಾಳ, ಪಾಂಚಾಳ, ಮೇದರ ಉಪ್ಪಾರ, ಗೌಳಿ, ಮರಾತ, ಮರಾಠ, ಅರೆ ಕ್ಷತ್ರಿ, ಅರೆ ಮರಾಠ, ಆರ್ಯ ಮರಾಠ, ಆರ್ಯ, ಆರ್ಯರು, ಕೊಂಕಣ ಮರಾಠ, ಕ್ಷತ್ರಿಯ ಮರಾಠ, ಕುಳವಾಡಿ, ಕ್ರಿಶ್ಚಿಯನ್, ಬಂಟ್/ಬಂಟ್, ಪರಿವಾರ ಬಂಟ್, ಜೈನರು (ದಿಗಂಬರರು), ಸಾತಾನಿ, ಚಾತ್ರದ ಶ್ರೀವೈಷ್ಣವ / ಚಾತ್ತಾದ ವೈಷ್ಣವ ಶಾತ್ತಾದ ವೈಷ್ಣವ / ಶಾತ್ರಾದ ಶ್ರೀವೈಷ್ಣವ, ಕದ್ರಿ ವೈಷ್ಣವ, ಸಮೆರಾಯ, ಸಾತ್ತದವಲ್, ಸಾತ್ತದವನ್, ವೈಷ್ಣವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.