ಬೆಂಗಳೂರು: ‘ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗಿದ್ದ ನಾಲ್ವರ ಪೈಕಿ ಮೂವರು ಆರೋಪಿಗಳು ಹಲ್ಲೆ ಹಾಗೂ ಅಪಹರಣ ಕೃತ್ಯದಲ್ಲೂ ಭಾಗಿ ಆಗಿಲ್ಲ. ಆದರೆ, ದರ್ಶನ್ ಮೇಲಿನ ಅಭಿಮಾನ ಹಾಗೂ ಹಣದ ಆಸೆಯಿಂದ ಠಾಣೆಗೆ ಬಂದು ಕೊಲೆ ಆರೋಪ ಹೊತ್ತು ಶರಣಾಗಿದ್ದರು’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ನಿಖಿಲ್, ಕೇಶವಮೂರ್ತಿ ಹಾಗೂ ಕಾರ್ತಿಕ್ ಅವರು ಕೊಲೆ ಮಾಡಿದ್ದ ಆರೋಪ ಹೊತ್ತು ಶರಣಾಗಿದ್ದವರು ಎಂದು ಮೂಲಗಳು ತಿಳಿಸಿವೆ.

ಚಿತ್ರದುರ್ಗದ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಹಾಗೂ ಸಹಚರರು ಜೂನ್ 8ರಂದು ಪಟ್ಟಣಗೆರೆ ಶೆಡ್ಗೆ ರೇಣುಕ ಅವರನ್ನು ಅಪಹರಿಸಿ ಕರೆ ತಂದಿದ್ದರು. ಪಾರ್ಟಿ ಮಾಡುತ್ತಿದ್ದ ಸ್ಥಳದಿಂದ ದರ್ಶನ್ ಹಾಗೂ ಪವಿತ್ರಾ ಬಂದಿದ್ದರು. ಪೊಲೀಸರಿಗೆ ಶರಣಾಗಿದ್ದ ಮೂವರು, ಹಲ್ಲೆ ಮಾಡುವಾಗ ಅಥವಾ ಅಪಹರಣ ಮಾಡುವಾಗ ಇರಲಿಲ್ಲ. ಅಲ್ಲದೇ ಶೆಡ್ ಒಳಗೆ ಹಾಗೂ ಹೊರಗೂ ಇರಲಿಲ್ಲ. ಕೊಲೆಯಾದ ಆತಂಕದಲ್ಲಿದ್ದ ದರ್ಶನ್ ಮತ್ತು ತಂಡವು ಚಿತ್ರದುರ್ಗದ ಜಗದೀಶ್, ರವಿ, ಅನುಕುಮಾರ್ಗೆ ಕೊಲೆ ಕೃತ್ಯ ಒಪ್ಪಿಕೊಳ್ಳುವಂತೆ ಸೂಚಿಸಿತ್ತು. ಆದರೆ, ಅವರು ಒಪ್ಪಿಕೊಳ್ಳಲಿಲ್ಲ. ಮತ್ತೊಬ್ಬ ಆರೋಪಿ, ವಿನಯ್ ಅವರು ಕಾರ್ತಿಕ್, ರಾಘವೇಂದ್ರ, ನಿಖಿಲ್, ಕೇಶವಮೂರ್ತಿ ಅವರಿಗೆ ಕರೆ ಮಾಡಿ ‘ತಲಾ ₹5 ಲಕ್ಷ ನೀಡುತ್ತೇನೆ. ಕೂಡಲೇ ಠಾಣೆಗೆ ಹೋಗಿ ಶರಣಾಗಿ’ ಎಂದು ಸೂಚಿಸಿದ್ದರು. ಅದರಂತೆ ಬಂದು ನಾಲ್ವರು ಶರಣಾಗಿದ್ದರು’ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.