ಕಲಬುರ್ಗಿ: ಆಳಂದ ತಾಲ್ಲೂಕಿನ ದೇಗಾಂವ ಗ್ರಾಮದವರುಮತದಾನ ಬಹಿಷ್ಕರಿಸಿದ್ದಾರೆ.ಗ್ರಾಮವನ್ನುಗ್ರಾಮ ಪಂಚಾಯಿತಿ ಕೇಂದ್ರವನ್ನಾಗಿಸುವಂತೆ 2ವರ್ಷದಿಂದ ಒತ್ತಾಯಿಸುತ್ತಿದ್ದ ಗ್ರಾಮಸ್ಥರು ಇಂದು(ಏ.23) ಮತದಾನ ಮಾಡದಿರಲು ನಿರ್ಧರಿಸಿದ್ದಾರೆ.

ಗ್ರಾಮದಲ್ಲಿ 1339 ಮತದಾರರು ಇದ್ದು, ಇವರಲ್ಲಿ 698 ಪುರುಷ ಮತ್ತು 641 ಮಹಿಳಾ ಮತದಾರರು ಇದ್ದಾರೆ.ಗ್ರಾಮ ಪಂಚಾಯಿತಿ ಪುನರ್ ವಿಂಗಡಣೆಯಲ್ಲಿ ಮೊದಲು ಈ ಗ್ರಾಮದ ಹೆಸರು ಇತ್ತು. ಜಿಲ್ಲಾಧಿಕಾರಿಗಳು ದೇಗಾಂವ ಪಂಚಾಯಿತಿ ಘೋಷಣೆ ಮಾಡಿದ್ದರು. ಆದರೆ ನಂತರ ಗ್ರಾಮಪಂಚಾಯಿತಿಕೇಂದ್ರ ರದ್ದುಗೊಂಡು ಸಮೀಪದ ಹಾಳ ತಡಕಲ ಗ್ರಾಮಕ್ಕೆ ಗ್ರಾ.ಪಂಕೇಂದ್ರ ನೀಡಲಾಗಿದೆ.

ಜನಸಂಖ್ಯೆ ಹೆಚ್ಚು, ಮೂಲಭೂತ ಸೌಲಭ್ಯ ಹೊಂದಿರುವ ಈ ಗ್ರಾಮಕ್ಕೆ ಪಂಚಾಯಿತಿ ಕೇಂದ್ರ ನೀಡದ ಕಾರಣ ಜನರು ಇಂದು ಲೋಕಸಭೆ ಚುನಾವಣೆಗೆ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ.

ತಹಶೀಲ್ದಾರ್ ಎಂ.ಎನ್.ಚೋರಗಸ್ತಿ ಗ್ರಾಮಸ್ಥರೊಂದಿಗೆ ಸಂಧಾನ ನಡೆಸಿದರೂ ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.