ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Photos| ಬೆಂಗಳೂರಿನಲ್ಲಿ ವೈನ್‌ ಮೇಳ: ದ್ರಾಕ್ಷಿ ತುಳಿದು ಸಾಂಪ್ರದಾಯಿಕ ವೈನ್ ತಯಾರಿಸಿದ ಯುವತಿಯರು

ತೋಟಗಾರಿಕೆ ಇಲಾಖೆ, ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಹಾಗೂ ಮಂತ್ರಿ ಮಾಲ್ ಸಹಯೋಗದಲ್ಲಿ ಎರಡು ದಿನಗಳ ದ್ರಾಕ್ಷಾರಸ ಮೇಳ ಶನಿವಾರ ಆರಂಭವಾಯಿತು.ಮಂತ್ರಿ ಮಾಲ್‌ನಲ್ಲಿ ನಡೆದಿರುವ ಮೇಳದಲ್ಲಿ ತರಹೇವಾರಿ ವೈನ್‌ಗಳು, ವೈನ್‌ಪ್ರಿಯರನ್ನು ಆಕರ್ಷಿಸುತ್ತಿವೆ. ಪೈನಾಪಲ್‌ನಿಂದ ತಯಾರಿಸಿದ ವೈನ್‌ ಮೇಳದಲ್ಲಿ ಗಮನ ಸೆಳೆಯುತ್ತಿದೆ.ಕರ್ನಾಟಕ ದ್ರಾಕ್ಷಿ ಮತ್ತು ವೈನ್‌ ಬೋರ್ಡ್ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ಹಾಗೂ ನಿರ್ದೇಶಕ ಎಸ್. ಅಭಿಲಾಷ ಕಾರ್ತಿಕ ಮೇಳಕ್ಕೆ ಚಾಲನೆ ನೀಡಿದರು. ಯುವತಿಯರು ಸ್ಥಳದಲ್ಲೇ ದ್ರಾಕ್ಷಿ ತುಳಿದು ಸಾಂಪ್ರದಾಯಿಕ ವೈನ್ ತಯಾರಿಸಿ ಸಂಭ್ರಮಿಸಿದರು.ಟಿ.ಸೋಮು ಮಾತನಾಡಿ, ‘ರಾಜ್ಯದ ದ್ರಾಕ್ಷಿ ಬೆಳೆಗಾರರಿಗೆ ವೈನ್ ನೀತಿ ಜಾರಿಗೊಳಿಸಿದ ಬಳಿಕ ಉತ್ತಮ ಬೆಲೆ ಸಿಗುತ್ತಿದೆ. ರಾಜ್ಯದಲ್ಲಿ 17 ವೈನ್ ಕಂಪನಿಗಳಿದ್ದು, 4 ಸಾವಿರ ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಬೆಳೆಯುತ್ತಾರೆ. ರೆಡ್‌ವೈನ್, ವೈಟ್‌ವೈನ್, ರೋಸ್ ವೈನ್, ಫೈನಾಪಲ್ ವೈನ್, ಹನಿಕ್ರಷ್ ವೈನ್, ಸ್ಪಾರ್‌ಲೆಗ್ ವೈನ್ ವಿವಿಧ ಮಾದರಿಯ ವೈನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದರು.ಮೇಳದಲ್ಲಿ ಪ್ರಟೇಲಿ ವೈನ್‌ ಸಂಸ್ಥೆ ಬಿಯರ್ ಕ್ಯಾನ್ ಮಾದರಿಯಲ್ಲಿ ಮೊದಲ ಬಾರಿಗೆ ‘ವೈನ್ ಕ್ಯಾನ್’ ಪರಿಚಯಿಸಿದೆ. ಟಿನ್‌ನಲ್ಲಿ ಕ್ಲಾಸಿಕ್ ರೆಡ್, ಕ್ಲಾಸಿಕ್‌ ವೈಟ್, ರೋಸೆ ಮತ್ತು ಬಬ್ಲಿ ಎಂಬ ನಾಲ್ಕು ಮಾದರಿಯ ವೈನ್‌ಗಳು ದೊರೆಯುತ್ತಿವೆ. ಪ್ರಟೇಲಿ ಸಂಸ್ಥೆ ಮೇಳದಲ್ಲಿ ಕ್ಯಾಬರ್ನೆಟ್ ಫ್ರಾನ್ಸಿಸ್ ಶಿರಾಜ್ ಎಂಬ ಬ್ರ್ಯಾಂಡ್ ಪರಿಚಯಿಸಿದೆ. ಬಿಡದಿ ವ್ಯಾಲಿ ಬ್ರೆವರೀಸ್ ಸಂಸ್ಥೆಯು ವೈಟ್ ಮತ್ತು ರೆಡ್ ವೈನ್ ಅನ್ನು ಏಲಕ್ಕಿ ಫ್ಲೇವರ್‌ನಲ್ಲಿ ತಯಾರಿಸಿದೆ. ದ್ರಾಕ್ಷಿ ಬಳಸಿ ಲವಂಗ ಫ್ಲೇವರ್‌ನಲ್ಲಿ ವೈನ್ ತಯಾರಿಸಲಾಗಿದೆ. ನಂದಿ ವ್ಯಾಲಿ ವೈನರಿ ಕಿಣ್ವಾ ವೈನ್‌ ಸಂಸ್ಥೆ ಸೀಬೇಕಾಯಿಯಿಂದ ವೈನ್ ತಯಾರಿಸಿದ್ದು, ಇದು ಕೂಡ ಮತ್ತೊಂದು ವಿಶೇಷವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
Published : 15 ಜನವರಿ 2023, 16:04 IST
ಫಾಲೋ ಮಾಡಿ
Comments
ಮೇಳದ ಮಳಿಗೆಯೊಂದಕ್ಕೆ  ಭೇಟಿ ನೀಡಿದ್ದ ಯುವತಿಯೊಬ್ಬರು ವೈನ್ ರುಚಿ ನೋಡುತ್ತಿರುವುದು – ಚಿತ್ರ: ಮರಿಯಾ ಎಸ್ ಮತ್ತತ್ತಿಲ್

ಮೇಳದಲ್ಲಿ ಗ್ರಾಹಕರಿಗೆ ವೈನ್‌ ನೀಡುತ್ತಿರುವುದು – ಚಿತ್ರ: ಮರಿಯಾ ಎಸ್ ಮತ್ತತ್ತಿಲ್

ದ್ರಾಕ್ಷಿಯನ್ನು ತುಳಿಯುವ ಮೂಲಕ ಸಾಂಪ್ರದಾಯಿಕ ವೈನ್ ತಯಾರಿಕೆಗೆ ಚಾಲನೆ ನೀಡಿದ ಯುವತಿಯರು. – ಚಿತ್ರ: ಮರಿಯಾ ಎಸ್ ಮತ್ತತ್ತಿಲ್

ಮೇಳದಲ್ಲಿನ ವೈನ್‌ಗಳನ್ನು ಕೂಲಂಕಷವಾಗಿ ನೋಡುತ್ತಿರುವ ಯುವತಿ – ಚಿತ್ರ: ಮರಿಯಾ ಎಸ್ ಮತ್ತತ್ತಿಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT